ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕ್‍ ಇನ್‍ ಇಂಡಿಯಾ ಎನ್ನುತ್ತಲೇ ಚೀನಾದಿಂದ ಅಧಿಕ ಆಮದು

Last Updated 30 ಜೂನ್ 2020, 19:07 IST
ಅಕ್ಷರ ಗಾತ್ರ

ನವದೆಹಲಿ: ಲಡಾಖ್‌ನ ಪೂರ್ವಗಡಿಯಲ್ಲಿ ಚೀನಾದೊಂದಿಗೆ ಭಾರತೀಯ ಸೇನೆ ಸಂಘರ್ಷ ನಡೆಸಿದಾಗಿನಿಂದಲೂ ಕೇಂದ್ರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿರುವ ರಾಹುಲ್‌ ಗಾಂಧಿ, ‘ಮೇಕ್‌ ಇನ್‌ ಇಂಡಿಯಾ’ ಯೋಜನೆ ಪ್ರಸ್ತಾಪಿಸಿ ವಾಗ್ದಾಳಿ ಮುಂದುವರಿಸಿದ್ದಾರೆ.

‘ಬಿಜೆಪಿ ಮೇಕ್‌ ಇನ್‌ ಇಂಡಿಯಾ ಯೋಜನೆ ಬಗ್ಗೆ ಭಾರಿ ಪ್ರಚಾರ ಮಾಡುತ್ತಿದೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ ಚೀನಾದಿಂದ ಸರಕುಗಳನ್ನು ಖರೀದಿಸುತ್ತಿದೆ‘ ಎಂದು ಮಂಗಳವಾರ ಟೀಕಿಸಿದ್ದಾರೆ.

ತಮ್ಮ ಟೀಕೆಗೆ ಸಮರ್ಥನೆಯಾಗಿ, ಎನ್‌ಡಿಎ ಹಾಗೂ ಯುಪಿಎ ಅವಧಿಯಲ್ಲಿ ಚೀನಾದಿಂದ ಆಮದು ಮಾಡಿಕೊಂಡಿರುವ ಸರಕುಗಳ ಪ್ರಮಾಣವನ್ನು ತೋರುವ ನಕ್ಷೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಂಗಳವಾರ ಭಾಷಣ ಮಾಡುವುದಕ್ಕೂ ಮುನ್ನ ವಿಡಿಯೊವೊಂದನ್ನು ಸಹ ಅವರು ಹಂಚಿಕೊಂಡಿದ್ದಾರೆ. ‘ಭಾರತದ ಪವಿತ್ರ ನೆಲವನ್ನು ಚೀನಾ ಕಬಳಿಸಿದೆ ಎಂಬ ವಿಷಯ ಇಡೀ ದೇಶಕ್ಕೆ ಗೊತ್ತು. ಲಡಾಖ್‌ನ ನಾಲ್ಕು ಪ್ರದೇಶಗಳಲ್ಲಿ ಚೀನಾ ಅತಿಕ್ರಮಣ ಮಾಡಿದೆ ಎಂಬುದು ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಗೊತ್ತು’ ಎಂದು ಈ ವಿಡಿಯೊ ಮೂಲಕ ವಾಕ್‌ ಪ್ರಕಾರ ಮುಂದುವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT