ಭಾನುವಾರ, ಮೇ 9, 2021
18 °C
ಪ್ರತಿಭಟನೆಗೆ ಬಿಜೆಪಿ ಕಾರಣ: ಅರವಿಂದ ಕೇಜ್ರಿವಾಲ್‌ ಆರೋಪ

ವ್ಯಾಟ್‌ ಕಡಿತಕ್ಕೆ ನಿರಾಕರಣೆ: 400 ಪೆಟ್ರೋಲ್‌ ಬಂಕ್‌ ಬಂದ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತೈಲದ ಮೇಲೆ ವಿಧಿಸುವ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್‌) ಕಡಿತಗೊಳಿಸಲು ನಿರಾಕರಿಸಿದ ದೆಹಲಿ ಸರ್ಕಾರದ ವಿರುದ್ಧ 400 ಪೆಟ್ರೋಲ್‌ ಬಂಕ್‌ಗಳು ಮತ್ತು ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ಸಂಸ್ಥೆಗಳು ಸೋಮವಾರ ಪ್ರತಿಭಟನೆ ನಡೆಸಿದವು.

ದೆಹಲಿಯ ಪೆಟ್ರೋಲ್‌ ಡೀಲರ್ಸ್‌ ಅಸೋಸಿಯೇಷನ್‌ (ಡಿಪಿಡಿಎ) ಪ್ರತಿಭಟನೆಯ ನೇತೃತ್ವ ವಹಿಸಿತ್ತು. 

‘ಪೆಟ್ರೋಲ್‌ ಬಂಕ್‌ ಮಾಲೀಕರು ಪ್ರತಿಭಟನೆ ನಡೆಸಲು ಬಿಜೆಪಿಯೇ ಕಾರಣ. ಪ್ರತಿಭಟನೆ ಮಾಡದಿದ್ದರೆ ಆದಾಯ ತೆರಿಗೆ ದಾಳಿ ನಡೆಸುವ ಬೆದರಿಕೆಯನ್ನು ಬಿಜೆಪಿ ಒಡ್ಡಿದೆ. ಅಲ್ಲದೇ ತೈಲ ಕಂಪನಿಗಳು ಕಠಿಣ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿವೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. 

‘ಬಿಜೆಪಿಯ ಪ್ರಾಯೋಜಕತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ ತೈಲ ಕಂಪನಿಗಳ ಸಂಪೂರ್ಣ ಬೆಂಬಲವಿದೆ’ ಎಂದು ಪೆಟ್ರೋಲ್‌ ಬಂಕ್‌ ಮಾಲೀಕರು ನನಗೆ ಖಾಸಗಿಯಾಗಿ ಹೇಳಿದ್ದಾರೆ’ ಎಂದು ಅವರು ತಿಳಿಸಿದ್ದಾರೆ. 

‘ನಾಲ್ಕು ಮೆಟ್ರೊ ನಗರಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ತೈಲ ಬೆಲೆ ಬಹಳ ಕಡಿಮೆ ಇದೆ. ಮುಂಬೈಯಲ್ಲಿ ತೈಲ ಬೆಲೆ ಅತಿ ಹೆಚ್ಚು ಇದ್ದರೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವ ಕಾರಣಕ್ಕೆ ಅಲ್ಲಿ ಪ್ರತಿಭಟನೆ ನಡೆದಿಲ್ಲ’ ಎಂದು ಎಎಪಿ ಮುಖಂಡರೊಬ್ಬರು ದೂರಿದ್ದಾರೆ. 

ಸದ್ಯ ದೆಹಲಿಯಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹ 81.74 ಇದ್ದು, ಡಿಸೇಲ್‌ ದರ ಲೀಟರ್‌ಗೆ ₹ 75.19 ಇದೆ. ಮುಂಬೈಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ ₹ 87.21 ಮತ್ತು ಡಿಸೇಲ್‌ ದರ ₹ 78.82 ಇದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು