ಲಂಡನ್: ಭಾರತವೂ ಸೇರಿದಂತೆ ಇತರ ದೇಶಗಳಿಂದ ಬ್ರಿಟನ್‌ಗೆ ಹೋಗುವವರು ವೀಸಾ ಪಡೆಯಲು ಹೆಚ್ಚು ಹಣ ತೆರಬೇಕಾಗುತ್ತದೆ.
ಹಣಕಾಸು ಸಚಿವ, ಭಾರತ ಮೂಲದ ರಿಷಿ ಸುನಕ್ ಅವರು ಬ್ರಿಟನ್‌ನ ಸಂಸತ್‌ನಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಇಂತಹ ಪ್ರಸ್ತಾಪವನ್ನು ಮಾಡಿದ್ದಾರೆ. ದೀರ್ಘ ಅವಧಿಗಾಗಿ ಪಡೆಯುವ ವೀಸಾಕ್ಕೆ ಹೆಚ್ಚು ಶುಲ್ಕ ನೀಡಬೇಕು. ಅದರಲ್ಲೂ ಆರೋಗ್ಯ ಶುಲ್ಕದಲ್ಲಿ ಹೆಚ್ಚಳ ಮಾಡುವ ಪ್ರಸ್ತಾವ ಮುಂದಿಟ್ಟಿದ್ದಾರೆ.
‘ವಲಸೆ ಆರೋಗ್ಯ ಸರ್ಚಾರ್ಜ್ ಪ್ರಮಾಣ ಸದ್ಯ ₹ 37,820 (400 ಪೌಂಡ್) ಇದ್ದು, ಇದನ್ನು ₹ 59,025ಕ್ಕೆ (624 ಪೌಂಡ್) ಹೆಚ್ಚಿಸಲಾಗುವುದು’ ಎಂದು ಸುನಕ್ ಹೇಳಿದ್ದಾರೆ.
18 ವರ್ಷದ ಒಳಗಿನವರಿಗೆ ಉದ್ದೇಶಿತ ಹೆಚ್ಚಳದಲ್ಲಿ ರಿಯಾಯಿತಿ ನೀಡಲಾಗುತ್ತಿದ್ದು, ವೀಸಾ ಶುಲ್ಕವನ್ನು ₹44,479 ನಿಗದಿ ಮಾಡಿದೆ. ವಿದ್ಯಾರ್ಥಿಗಳಿಗೆ ಈ ವರೆಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ₹28,395ರಿಂದ (300 ಪೌಂಡ್) ₹ 44,479ಗೆ ಹೆಚ್ಚಿಸುವ ಪ್ರಸ್ತಾವವೂ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.