ಸಿಎಪಿಎಫ್‌ ಜವಾನರಿಗೆ ವಿಮಾನಯಾನ ಸೌಲಭ್ಯ

ಮಂಗಳವಾರ, ಮೇ 21, 2019
24 °C

ಸಿಎಪಿಎಫ್‌ ಜವಾನರಿಗೆ ವಿಮಾನಯಾನ ಸೌಲಭ್ಯ

Published:
Updated:

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಭಾಗದ ಕೇಂದ್ರೀಯ ಸಶಸ್ತ್ರ ಪಡೆಯ (ಸಿಎಪಿಎಫ್‌) ಸಿಬ್ಬಂದಿಯ ಅನುಕೂಲಕ್ಕಾಗಿ ವಿಮಾನಯಾನ ಸೌಲಭ್ಯವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ.

ಪುಲ್ವಾಮಾ ದಾಳಿ ನಂತರ  ಗೃಹ ಸಚಿವಾಲಯ ಈ ನಿರ್ಧಾರ ಪ್ರಕಟಿಸಿದೆ. ದೆಹಲಿ–ಶ್ರೀನಗರ, ಶ್ರೀನಗರ–ದೆಹಲಿ, ಜಮ್ಮು–ಶ್ರೀನಗರ ಮತ್ತು ಶ್ರೀನಗರ–ಜಮ್ಮು ಭಾಗದಲ್ಲಿ ಪ್ರಯಾಣಿಸುವ ಎಲ್ಲಾ ಸಿಎಪಿಎಫ್‌ ಸಿಬ್ಬಂದಿಯೂ ಈ ಸೌಲಭ್ಯ ಬಳಿಸಿಕೊಳ್ಳಬಹುದು.

ಇಲ್ಲಿಯವರೆಗೆ ವಿಮಾನ ಯಾನ ಸೌಲಭ್ಯವಿಲ್ಲದ ಸಿಎಪಿಎಫ್‌ನ ಕಾನ್‌ಸ್ಟೆಬಲ್‌ , ಹೆಡ್‌ ಕಾನ್‌ಸ್ಟೆಬಲ್‌ ಮತ್ತು ಎಎಸ್‌ಐ ಸೇರಿ ಒಟ್ಟು 7,80,000 ಸಿಬ್ಬಂದಿಗೆ ಇದರಿಂದ ಅನುಕೂಲವಾಗಲಿದೆ. ಕೆಲಸದ ಸಂದರ್ಭದಲ್ಲಿ ಪ್ರಯಾಣಿಸುವುದು ಹಾಗೂ ರಜೆ ವೇಳೆಯ ಪ್ರಯಾಣಿಸುವುದು ಎಲ್ಲವೂ ಇದರಲ್ಲಿ ಒಳಗೊಳ್ಳುತ್ತದೆ.

ಸಿಎಪಿಎಫ್‌ಗೆ ಈಗಿರುವ ಸರಕು ಸಾಗಣೆ ವಿಮಾನ ಸೇವೆಗೆ ಹೆಚ್ಚುವರಿಯಾಗಿ ಈ ಸೌಲಭ್ಯವನ್ನು ನೀಡಲಾಗಿದೆ. ಸಿಎಪಿಎಫ್‌ ಜವಾನರ ತಮ್ಮ ಊರುಗಳಿಗೆ ಹೋಗುವ ಪ್ರಯಾಣದ ಸಮಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಸೌಲಭ್ಯವನ್ನು ನೀಡಲಾಗಿದೆ.

ಫೆಬ್ರುವರಿ 14ರಂದು ಸಿಆರ್‌ಪಿಎಫ್‌ ಸಿಬ್ಬಂದಿ ಜಮ್ಮುವಿನಿಂದ ಶ್ರೀನಗರಕ್ಕೆ ಹೋಗುವಾಗಲೇ ಉಗ್ರರ ಆತ್ಮಾಹುತಿ ದಾಳಿಗೆ ಸುಮಾರು 40 ಮಂದಿ ಜವಾನರು ಮೃತಪಟ್ಟಿದ್ದರು. ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಸರ್ಕಾರ ಈ ಸಿಎಪಿಎಫ್‌ ಜವಾನರಿಗೆ ಈ ಸೌಲಭ್ಯ ಒದಗಿಸಿದೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !