ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ಸಾಧನ ಬಳಸಿದರಷ್ಟೇ ಮೆಟ್ರೊಗೆ ಕೇಂದ್ರದ ಅನುದಾನ

Last Updated 2 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಮೆಟ್ರೊ ರೈಲು ನಿಲ್ದಾಣಗಳ ಯಾಂತ್ರಿಕ ವ್ಯವಸ್ಥೆಯಲ್ಲಿ ಭಾರತದಲ್ಲಿಯೇ ತಯಾರಿಸಿದ ವಿದ್ಯುತ್‌ ಬಿಡಿಭಾಗಗಳನ್ನು ಬಳಸಲು ಕೇಂದ್ರ ಸರ್ಕಾರ ಮಾನದಂಡಗಳನ್ನು ರೂಪಿಸಿದೆ.

ಮಹತ್ವಾಕಾಂಕ್ಷೆಯ ‘ಭಾರತದಲ್ಲಿಯೇ ತಯಾರಿಸಿ’ ಯೋಜನೆ ಅಡಿ ತಯಾರಿಸಲಾದ ಸಾಧನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಈ ಹೆಜ್ಜೆಯನ್ನು ಇಟ್ಟಿದೆ.

ಮೆಟ್ರೊ ನಿಲ್ದಾಣಗಳಲ್ಲಿ ವಿದ್ಯುತ್‌ ಹಾಗೂ ಇನ್ನಿತರ ವ್ಯವಸ್ಥೆಗಳಲ್ಲಿ ಬಳಸುವ ಬಿಡಿಭಾಗಗಳ ಗುಣಮಟ್ಟ ನಿರ್ಧರಿಸಲು ಈ ಮಾನದಂಡಗಳು ಅಳತೆಗೋಲು ಆಗಲಿವೆ.

ಮೆಟ್ರೊ ನಿಲ್ದಾಣಗಳಲ್ಲಿ ಅಳವಡಿಸುವ ಲಿಫ್ಟ್, ಸ್ವಯಂಚಾಲಿತ ಮೆಟ್ಟಿಲು ವ್ಯವಸ್ಥೆ (ಎಸ್ಕಲೇಟರ್‌) ಕೊಳವೆಮಾರ್ಗಗಳ ವಾತಾನುಕೂಲಿ ವ್ಯವಸ್ಥೆ, ವಿದ್ಯುತ್‌ ಸರಬರಾಜು ವ್ಯವಸ್ಥೆಯಲ್ಲಿ ಅಳವಡಿಸುವ ಬಿಡಿಭಾಗಗಳಿಗೆ ಇದು ಅನ್ವಯಿಸಲಿದೆ.

ಮೆಟ್ರೊ ಯೋಜನೆಗಳಿಗೆ ಕೇಂದ್ರದ ಆರ್ಥಿಕ ನೆರವು ಕೋರುವ ರಾಜ್ಯಗಳು ಈ ಮಾನದಂಡ ಅನುಸರಿಸುವುದು ಕಡ್ಡಾಯ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT