ಬುಧವಾರ, ನವೆಂಬರ್ 20, 2019
20 °C

ಚಂದ್ರಯಾನ–2ರ  ಶೇ 98 ಉದ್ದೇಶ ಈಡೇರಿದೆ: ಶಿವನ್‌ 

Published:
Updated:
Prajavani

ಭುವನೇಶ್ವರ: ಚಂದ್ರಯಾನ– 2 ರ ಉದ್ದೇಶ ಶೇ 98 ರಷ್ಟು ಈಡೇರಿದೆ. ಲ್ಯಾಂಡರ್‌ ವಿಕ್ರಂ ಅನ್ನು ಸಂಪರ್ಕಿಸಲು ವಿಜ್ಞಾನಿಗಳು ಕಠಿಣ ಯತ್ನದಲ್ಲಿದ್ದಾರೆ ಎಂದು ಇಸ್ರೊ ಅಧ್ಯಕ್ಷ ಕೆ.ಶಿವನ್‌ ಶನಿವಾರ ಹೇಳಿದ್ದಾರೆ.

ಚಂದ್ರಯಾನ–2 ಆರ್ಬಿಟರ್‌ ನಿಗದಿತ ವೈಜ್ಞಾನಿಕ ಪ್ರಯೋಗಗಳ ರೀತಿ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.

‘2020ರ ವೇಳೆ ಮತ್ತೊಂದು ಚಂದ್ರಯಾನದ ಬಗ್ಗೆ ಇಸ್ರೊ ಯೋಚನೆ ಮಾಡುತ್ತಿದೆ’ ಎಂದು ಶಿವನ್‌ ಇದೇ ವೇಳೆ ಪ್ರಕಟಿಸಿದರು.

ವಿಕ್ರಂ ಜತೆಗಿನ ಸಂಪರ್ಕ ಕಡಿತಗೊಂಡಿದ್ದಕ್ಕೆ ಕಾರಣ ಏನು ಎಂಬ ಬಗ್ಗೆ ವಿಜ್ಞಾನಿಗಳು ಮತ್ತು ಇಸ್ರೊ ತಜ್ಞರನ್ನು ಒಳಗೊಂಡ ಸಮಿತಿ ವಿಶ್ಲೇಷಣೆ ಮಾಡುತ್ತಿದೆ ಎಂದರು.  

2021 ಕ್ಕೆ ಗಗನಯಾನ:

2021 ರ ಹೊತ್ತಿಗೆ ಮೊದಲ ಬಾರಿಗೆ ಭಾರತೀಯನನ್ನು ಹೊತ್ತು ನಮ್ಮದೇ ರಾಕೆಟ್‌ ಆಗಸಕ್ಕೆ ಚಿಮ್ಮಲಿದೆ. ಇದು ಇಸ್ರೊ ಗುರಿ ಎಂದು ಶಿವನ್‌ ಹೇಳಿದರು. 

ಗಗನಯಾನ ಯೋಜನೆ ಭಾರತಕ್ಕೆ ಸದ್ಯದ ಮಟ್ಟಿಗೆ ಬಹಳ ಪ್ರಮುಖವಾದುದು. ಏಕೆಂದರೆ ಇದರಿಂದ ದೇಶದ ವಿಜ್ಞಾನ ಮತ್ತು ತಂತ್ರಜ್ಞಾನದ ಸಾಮರ್ಥ್ಯ ಹೆಚ್ಚಲಿದೆ. ಆದ್ದರಿಂದಲೇ ನಾವು ಹೊಸ ಗುರಿಯತ್ತ ಮುಖ ಮಾಡಿದ್ದೇವೆ ಎಂದರು. 

ಚಂದ್ರಯಾನ– 2 ನಿರೀಕ್ಷೆಯಂತೆ ಆಗಲಿಲ್ಲ. ಆದರೆ ಗಗನಯಾನ ಹಾಗೆ ಆಗುವುದಿಲ್ಲ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. 

ಪ್ರತಿಕ್ರಿಯಿಸಿ (+)