ನವದೆಹಲಿ: ಒಲಿಂಪಿಯನ್ ಪಿ.ವಿ.ಸಿಂಧು ಅವರು ದುಬೈ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಅಲ್ಲಿನ ಉದ್ವಿಗ್ನ ಪರಿಸ್ಥಿತಿಯ ಬಗ್ಗೆ ಹಾಗೂ ಎದುರಾದ ಸಂಕಷ್ಟಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಬೆಂಗಳೂರಿನಿಂದ ನಾವು ಹೊರಟಿದ್ದ ವಿಮಾನವು ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯುವಷ್ಟರಲ್ಲಿ ಪರಿಸ್ಥಿತಿ ಕೈಮೀರಿತ್ತು. ಎಲ್ಲ ವಿಮಾನಗಳು ರದ್ದಾಗಿ ನಾವು ಅತಂತ್ರಗೊಂಡೆವು. ಸ್ವಲ್ಪ ಹೊತ್ತಿನ ನಂತರ, ಕೋಚ್ ಇರ್ವಾನ್ಸ್ಯಾ ಆದಿ ಪ್ರಥಮ ಅವರಿಂದ ಕೇವಲ 100 ಮೀ. ದೂರದಲ್ಲಿಯೇ ಸ್ಫೋಟ ಸಂಭವಿಸಿತು. ನಾವು ಭೀತಿಗೊಳಗಾಗಿದ್ದೆವು’ ಎಂದು ಸಿಂಧು ಅವರು ವಿಮಾನ ನಿಲ್ದಾಣದಲ್ಲಿನ ಪರಿಸ್ಥಿತಿಯನ್ನು ಕಟ್ಟಿಕೊಟ್ಟರು.

‘ವಿಮಾನ ನಿಲ್ದಾಣದಲ್ಲಿ ಅತಂತ್ರ ಸ್ಥಿತಿಯಲ್ಲಿದ್ದ ನಮ್ಮನ್ನು ಸದ್ಯ ಸುರಕ್ಷಿತ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ’ ಎಂದು ಸಿಂಧು ಹೇಳಿದರು.

‘ವಿಮಾನ ನಿಲ್ದಾಣದ ಅಧಿಕಾರಿಗಳು ನಮ್ಮನ್ನು ಹೋಟೆಲ್ಗೆ ಸ್ಥಳಾಂತರಿಸಿದ್ದಾರೆ. ನಾವು ಸುರಕ್ಷಿತವಾಗಿದ್ದೇವೆ. ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಸ್ನಲ್ಲಿ ಸಿಂಧು ಬುಧವಾರ ಕಣಕ್ಕಿಳಿಯಬೇಕಿದೆ. ಆದರೆ, ಅಷ್ಟರೊಳಗೆ ಬರ್ಮಿಂಗ್ಹ್ಯಾಮ್ಗೆ ತೆರಳುವುದು ಹೇಗೆ ಎಂಬ ಸವಾಲು ಎದುರಾಗಿದೆ’ ಎಂದು ಕೋಚ್ ಇರ್ವಾನ್ಸ್ಯಾ ಹೇಳಿದರು.

ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ಸ್ ಬರ್ಮಿಂಗ್ಹ್ಯಾಮ್ನಲ್ಲಿ ಮಂಗಳವಾರ ಆರಂಭವಾಗಲಿದೆ. ಭಾರತದ ಅಗ್ರಮಾನ್ಯ ಸಿಂಗಲ್ಸ್ ಜೋಡಿ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ– ಚಿರಾಗ್ ಶೆಟ್ಟಿ, ಸಿಂಗಲ್ಸ್ ಆಟಗಾರರಾದ ಲಕ್ಷ್ಯ ಸೇನ್, ಆಯುಷ್ ಶೆಟ್ಟಿ, ಮಾಳವಿಕಾ ಬನ್ಸೋಡ್ ಅವರು ಈಗಾಗಲೇ ಬರ್ಮಿಂಗ್ಹ್ಯಾಮ್ಗೆ ತಲುಪಿದ್ದಾರೆ. ಆದರೆ, ಉನ್ನತಿ ಹೂಡ ಅವರು ಪಯಣಿಸಬೇಕಿದ್ದ ನವದೆಹಲಿ– ಬರ್ಮಿಂಗ್ಹ್ಯಾಮ್ ನಡುವಿನ ನೇರ ವಿಮಾನ ಕೊನೆಯ ಕ್ಷಣದಲ್ಲಿ ರದ್ದಾಗಿದೆ.

‘ಪರಿಸ್ಥಿತಿಯ ಬಗ್ಗೆ ನಿಗಾ ವಹಿಸಿದ್ದೇವೆ. ಆಟಗಾರರ ಪ್ರಯಾಣಕ್ಕೆ ಎದುರಾಗಿರುವ ಸವಾಲುಗಳನ್ನು ಬ್ಯಾಡ್ಮಿಂಟನ್ ಇಂಗ್ಲೆಂಡ್ ಸಂಸ್ಥೆಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ. ಸಿಂಗಪುರ ಮಾರ್ಗದಲ್ಲಿ ಪ್ರಯಾಣಿಸಲು ಆಟಗಾರರಿಗೆ ಅವಕಾಶ ಮಾಡಿಕೊಡಲು ಯತ್ನಿಸುತ್ತಿದ್ದೇವೆ’ ಎಂದು ಬಿಎಐ ಕಾರ್ಯದರ್ಶಿ ಸಂಜಯ್ ಮಿಶ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.