ಅಕ್ರಮ ಹಣ ವರ್ಗಾವಣೆ: ಲಾಲು ಪುತ್ರಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಕೆ

ಶುಕ್ರವಾರ, ಜೂಲೈ 19, 2019
24 °C

ಅಕ್ರಮ ಹಣ ವರ್ಗಾವಣೆ: ಲಾಲು ಪುತ್ರಿ ವಿರುದ್ಧ ಪೂರಕ ಆರೋಪಪಟ್ಟಿ ಸಲ್ಲಿಕೆ

Published:
Updated:

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಪುತ್ರಿ ಮೀಸಾ ಭಾರ್ತಿ ಹಾಗೂ ಇತರರ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ದೆಹಲಿ ನ್ಯಾಯಾಲಯಕ್ಕೆ ಬುಧವಾರ ಪೂರಕ ಆರೋಪಪಟ್ಟಿ ಸಲ್ಲಿಸಿದೆ.

ತನಿಖಾ ಸಂಸ್ಥೆಯು ಆರೋಪಪಟ್ಟಿಯಲ್ಲಿ 35 ಹೊಸ ಆರೋಪಿಗಳ ಹೆಸರುಗಳನ್ನು ಉಲ್ಲೇಖಿಸಿದೆ. ಇವುಗಳಲ್ಲಿ ಕಂಪನಿಗಳ ಹೆಸರುಗಳು ಹಾಗೂ ಎಂಟು ಮಂದಿ ಲೆಕ್ಕ ಪರಿಶೋಧಕರ ಹೆಸರುಗಳ ಒಳಗೊಂಡಿವೆ.

ಸುರೇಂದ್ರ ಕುಮಾರ್‌ ಜೈನ್‌ ಮತ್ತು ವೀರೇಂದ್ರ ಜೈನ್‌ ಹಾಗೂ ಇತರರು ಶೆಲ್‌ ಕಂಪೆನಿಗಳ ಮೂಲಕ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 2017ರಲ್ಲಿ ಇ.ಡಿ ಫಾರ್ಮ್‌ಹೌಸ್‌ಗಳಲ್ಲಿ ಪರಿಶೋಧನೆ ನಡೆಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿ ಲೆಕ್ಕ ಪರಿಶೋಧಕ ರಾಜೇಶ್‌ ಅಗರ್‌ವಾಲ್‌ ಎಂಬಾತನನ್ನು ಈ ಹಿಂದೆ ಬಂಧಿಸಲಾಗಿತ್ತು.

₹1.2 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈನ್ ಸಹೋದರರು, ಅಗರ್‌ವಾಲ್‌, ಲಾಲು ಪುತ್ರಿ ಹಾಗೂ ಅಳಿಯ ಶಾಮೀಲಾಗಿದ್ದಾರೆ ಎಂದು ಹಿಂದೆ ಇ.ಡಿ. ಆರೋಪಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !