ಶುಕ್ರವಾರ, ಡಿಸೆಂಬರ್ 6, 2019
19 °C

ಹಿಂದೊಮ್ಮೆ ತಾವೇ ಉದ್ಘಾಟಿಸಿದ್ದ ಸಿಬಿಐ ಕಚೇರಿಯಲ್ಲಿ ಬಂದಿಯಾದ ಚಿದಂಬರಂ

ಎಎನ್‌ಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಐಎನ್‌ಎಕ್ಸ್‌ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ಬುಧವಾರ ರಾತ್ರಿ 9.45ರ ಸುಮಾರಿನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿ ದೆಹಲಿಯ ಸಿಬಿಐ ಸಂಕೀರ್ಣಕ್ಕೆ ಕರೆದೊಯ್ದರು. 

ಸದ್ಯ ದೆಹಲಿಯ ಸಿಬಿಐ ಕಚೇರಿಯಲ್ಲಿ ಬಂದಿಯಾಗಿರುವ ಚಿದಂಬರಂ ಅವರು ಅಲ್ಲಿ ವಿಚಾರಣೆಗೆ ಒಳಗಾಗಿದ್ದಾರೆ. ವಿಚಿತ್ರವೆಂದರೆ, ಆ ಕಚೇರಿಯ ಉದ್ಘಾಟನೆಯನ್ನು ಚಿದಂಬರಂ ಅವರೇ ಮಾಡಿದ್ದರು! 

2011ರ ಜೂನ್‌ 30ರಂದು ದೆಹಲಿಯ ಸಿಬಿಐ ಸಂಕೀರ್ಣವನ್ನು  ಅಂದು ಕೇಂದ್ರ ಗೃಹ ಸಚಿವರಾಗಿದ್ದ ಚಿದಂಬರಂ, ಅಂದಿನ ಪ್ರಧಾನಿ ಮನಮೋಹನ್‌ ಸಿಂಗ್‌ ನೆರವೇರಿಸಿದ್ದರು. ಉದ್ಘಾಟನಾ ಸಮಾರಂಭದಲ್ಲಿ ಅಂದಿನ ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಕಪಿಲ್‌ ಸಿಬಲ್‌ ಸೇರಿದಂತೆ ಹಲವು ಭಾಗವಹಿಸಿದ್ದರು.

ಉದ್ಘಾಟನಾ ಸಮಾರಂಭದ ವಿಡಿಯೊ ಇಲ್ಲಿದೆ...

ಚಿದಂಬರಂ ತಾವೇ ಉದ್ಘಾಟಿಸಿದ್ದ ಕಚೇರಿಯಲ್ಲಿ ತಾವೇ ಬಂದಿಯಾಗಿರುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ.  

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು