ಮೋದಿ ವಿರುದ್ಧ ಮತ್ತೆ ದೂರು

ಶನಿವಾರ, ಮೇ 25, 2019
32 °C

ಮೋದಿ ವಿರುದ್ಧ ಮತ್ತೆ ದೂರು

Published:
Updated:

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಕಚೇರಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ತಡೆ ನೀಡಿ ಎಂದು ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

‘ಮುಂದಿನ ದಿನಗಳಲ್ಲಿ ಮೋದಿ ಎಲ್ಲೆಲ್ಲಿ ರ‍್ಯಾಲಿ ನಡೆಸುತ್ತಾರೋ, ಆ ಪ್ರದೇಶದ ಸಾಂಸ್ಕೃತಿಕ ಲಕ್ಷಣಗಳ ಬಗ್ಗೆ ಮಾಹಿತಿ ನೀಡುವಂತೆ ನೀತಿ ಆಯೋಗದ ಮೂಲಕ ಆಯಾ ಜಿಲ್ಲಾಡಳಿತಗಳಿಗೆ ಪತ್ರ ಬರೆಯಲಾಗಿದೆ. ಪ್ರಧಾನಿ ಕಚೇರಿಯು ನೀತಿ ಆಯೋಗದ ಮೂಲಕ ಈ ಕೆಲಸ ಮಾಡಿಸುತ್ತಿದೆ. 40 ವರ್ಷಗಳ ಹಿಂದೆ ಇಂದಿರಾ ಗಾಂಧಿ ಅವರ ಮೇಲೆ ಇಂಥದ್ದೇ ಆರೋಪದ ಆಧಾರದಲ್ಲಿ ಕ್ರಮ ತೆಗೆದುಕೊಳ್ಳಲಾಗಿತ್ತು. ಮೋದಿ ವಿರುದ್ಧವೂ ಕ್ರಮ ತೆಗೆದುಕೊಳ್ಳಿ’ ಎಂದು ಕಾಂಗ್ರೆಸ್‌ ಆಗ್ರಹಿಸಿದೆ.

ಮೋದಿ ಅವರು ಮೇ 6ರಂದು ಮಧ್ಯಪ್ರದೇಶದ ಸಾಗರ್‌ನಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಅದೇ ದಿನ ಪಕ್ಕದ ದಮೋಹ್ ಕ್ಷೇತ್ರದಲ್ಲಿ ಮತದಾನ ನಡೆಯಲಿದೆ. ಆ ರ‍್ಯಾಲಿಯು ಮತದಾನವನ್ನು ಪ್ರಭಾವಿಸಲಿದೆ. ಇದಕ್ಕೂ ತಡೆ ನೀಡಬೇಕು ಎಂದು ಕಾಂಗ್ರೆಸ್‌ ತನ್ನ ದೂರಿನಲ್ಲಿ ಆಗ್ರಹಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !