ಶುಕ್ರವಾರ, ಫೆಬ್ರವರಿ 28, 2020
19 °C

ಎಲ್ಲ ಸ್ವರೂಪದ ಕೋಮುವಾದದ ವಿರುದ್ಧ ಕಾಂಗ್ರೆಸ್‌ ನಿಲ್ಲಬೇಕು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಚ್ಚಿ: ‘ಕೋಮುವಾದವನ್ನು ವಿರೋಧಿಸುವ ಸಂದರ್ಭದಲ್ಲಿ ಮೃದು ಭಾವನೆಯನ್ನು ಹೊಂದಿರದೆ, ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಅನುಸರಿಸುತ್ತಿರುವ ಕೋಮುವಾದವನ್ನೂ ಕಾಂಗ್ರೆಸ್‌ ವಿರೋಧಿಸಬೇಕು’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ. 

‘ಆರ್‌ಎಸ್‌ಎಸ್‌ ಮಾದರಿ, ಬಿಜೆಪಿ ಮಾದರಿ ಕೋಮುವಾದವು ಪಿಎಫ್‌ಐ ಅಥವಾ ಜಮತ್‌–ಎ–ಇಸ್ಲಾಮಿ ಮಾದರಿಯ ಕೋಮುವಾದದಷ್ಟೇ ಭಾರತಕ್ಕೆ ಅಪಾಯಕಾರಿ. ಎಲ್ಲ ರೀತಿಯ ಕೋಮುವಾದದ ವಿರುದ್ಧ ಆಕ್ರಮಣಕಾರಿಯಾಗಿ ಹೋರಾಡುವುದೇ ನಿಜವಾದ ಜಾತ್ಯಾತೀತತೆ. ಈ ವಿಚಾರದಲ್ಲಿ ಆಯ್ಕೆ ಇರಬಾರದು. ಬಹುಸಂಖ್ಯಾತ ಕೋಮುವಾದದಷ್ಟೇ ಅಲ್ಪಸಂಖ್ಯಾತ ಕೋಮುವಾದವು ಅಪಾಯಕಾರಿ’ ಎಂದಿದ್ದಾರೆ. 

‘ಸಿಎಎ ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಆದರೆ ಪೌರತ್ವ ನೀಡುವಾಗ ಧರ್ಮದ ಆಧಾರದಲ್ಲಿ ನೀಡುವುದು ಸರಿಯಲ್ಲ. ಹೀಗಾಗಿ ನಾನು ಅದನ್ನು ವಿರೋಧಿಸುತ್ತೇನೆ’ ಎಂದು ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು