ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ನಿರ್ಮಿತ ಹೈಸ್ಪೀಡ್ ರೈಲು ಅನಾವರಣ

Last Updated 29 ಅಕ್ಟೋಬರ್ 2018, 16:02 IST
ಅಕ್ಷರ ಗಾತ್ರ

ಚೆನ್ನೈ: ಸ್ವದೇಶಿ ನಿರ್ಮಿತ ಮೊದಲ ಹೈಸ್ಪೀಡ್ ರೈಲು ‘ಟ್ರೈನ್ 18’ ಅನ್ನು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ಅವರು ಸೋಮವಾರ ಇಲ್ಲಿ ಅನಾವರಣಗೊಳಿಸಿದರು.

ಚೆನ್ನೈನ ‘ಇಂಟಿಗ್ರಲ್ ಕೋಚ್ ಫ್ಯಾಕ್ಟರಿ–ಐಸಿಎಫ್‘ನಲ್ಲಿ ಅಭಿವೃದ್ಧಿಪಡಿಸಿರುವ ಈ ರೈಲನ್ನು ಪ್ರಾಯೋಗಿಕ ಸಂಚಾರಕ್ಕೆ ಒಳಪಡಿಸಲಾಗುತ್ತದೆ. ಪರೀಕ್ಷೆಗಳು ನಿರೀಕ್ಷಿತ ಫಲಿತಾಂಶ ನೀಡಿದಲ್ಲಿ ‘ಶತಾಬ್ದಿ ಎಕ್ಸ್‌ಪ್ರೆಸ್‌’ಗಳ ಜಾಗದಲ್ಲಿ ಇಂಥದ್ದೇ ರೈಲುಗಳು ಓಡಲಿವೆ.

ಈ ರೈಲಿನಲ್ಲಿ ಎಂಜಿನ್ ಇಲ್ಲ. ಬದಲಿಗೆ ಪ್ರತಿ ಬೋಗಿಯಲ್ಲಿ ಎರಡು ವಿದ್ಯುತ್ ಮೋಟರ್‌ಗಳಿವೆ. ಹೀಗಾಗಿ ವೇಗವರ್ಧನೆ ಮತ್ತು ಬ್ರೇಕಿಂಗ್ ಕಾರ್ಯಕ್ಷಮತೆ ಉತ್ತಮವಾಗಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT