ಭಾನುವಾರ, ಜೂಲೈ 12, 2020
29 °C

20 ಸೆಕೆಂಡ್‌ಗಳ ಕಾಲ ಕೈ ಶುಚಿ ಖಾತರಿಗೆ ಸಾಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಾಬೂನು ಬಳಕೆದಾರರು ಕೈಶುಚಿ ಪಡಿಸಿಕೊಳ್ಳಲು 20 ಸೆಕೆಂಡಿಗೂ ಅಧಿಕ ಕಾಲ ವ್ಯಯಿಸುವರು ಎಂಬುದನ್ನು ಖಾತರಿಪಡಿಸಿಕೊಳ್ಳಲು ಸಂಶೋಧಕರು ಈಗ ಇಂಟರ್ ನೆಟ್‍ ಆಫ್‍ ಥಿಂಗ್ಸ್ (ಐಒಟಿ) ಸಾಧನ ರೂಪಿಸಿದ್ದಾರೆ.

ವಿಶ‍್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‍ಒ) ಮಾರ್ಗಸೂಚಿಯ ಪ್ರಕಾರ, ಪರಿಣಾಮಕಾರಿಯಾಗಿ ಕೈಶುಚಿ ಪಡಿಸಿಕೊಳ್ಳಲು 20 ಸೆಕೆಂಡ್ ವ್ಯಯಿಸಬೇಕು. ಈ ಸಾಧನ ಅದನ್ನು ಖಾತರಿಪಡಿಸಿಕೊಳ್ಳಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಬ್ಯಾಟರಿ ಮೂಲಕ ಕಾರ್ಯನಿರ್ವಹಿಸುವ ‘20 ಸೆಕೆಂಡ್‌ ಫಾರ್ ಲೈಫ್‌’ ಹೆಸರಿನ ಎಂಬ ಸಾಧನವನ್ನು ಲಿಕ್ವಿಡ್‌ ವಾಶ್ ಡಿಸ್ಪೆನ್ಸರ್ ಪರಿಕರಕ್ಕೆ ಅಳವಡಿಸಬಹುದು. ಕೈಶುಚಿಗೊಳಿಸುವಾಗ 20 ಸೆಕೆಂಡ್‍ ಕಾಲ ಈ ಸಾಧನ ಬೆಳಗಲಿದ್ದು, ಹಿನ್ನೆಲೆಯಲ್ಲಿ ಸಂಗೀತ ಹೊರಹೊಮ್ಮಲಿದೆ. ಈ ಮೂಲಕ ಬಳಕೆದಾರರು ಸಮಯವನ್ನು ಖಾತರಿಪಡಿಸಿಕೊಳ್ಳಬಹುದು.

ಕೋವಿಡ್‍ ತಡೆಗೆ ಕೈಗಳನ್ನು ಶುಚಿಯಾಗಿ ಇಟ್ಟುಕೊಳ್ಳುವುದು ಒಂದು ಮಾರ್ಗ. ಕೊರೊನಾ ಸೋಂಕು ಪ್ರಸರಣವನ್ನು ತಡೆಯಲು ಈ ಸಾಧನ ನೆರವಾಗಲಿದೆ ಎಂದು ಪಂಜಾಬಿನ ಲವ್ಲಿ ಪ್ರೊಫೆಷನಲ್‍ ಯೂನಿವರ್ಸಿಟಿಯ ಬಿ.ಟೆಕ್ ವಿದ್ಯಾರ್ಥಿ ಪ್ರಬಿನ್‍ ಕುಮಾರ್ ದಾಸ್‍ ಅವರು ಪ್ರತಿಕ್ರಿಯಿಸಿದ್ದಾರೆ.

ದಾಸ್‍ ಮತ್ತು ಇತರ ನಾಲ್ವರ ತಂಡ ನಾಲ್ಕು ಮಾದರಿಯಲ್ಲಿ ಪರಿಕರಗಳನ್ನು ಅಭಿವೃ‍ದ್ಧಿಪಡಿಸಿದೆ. ಉನ್ನತ ಮಾದರಿಯ ಸಾಧನವನ್ನು ವೈ-ಫೈ ಮೂಲಕ ಮೊಬೈಲ್‍ ಫೋನ್‍ಗೂ ಜೋಡಣೆ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು