ಬುಧವಾರ, ನವೆಂಬರ್ 13, 2019
22 °C

ಎಚ್‌ಎಎಲ್‌: ತೇಜಸ್‌ನಲ್ಲಿ ರಕ್ಷಣಾ ಸಚಿವರ ಹಾರಾಟ

Published:
Updated:
Prajavani

ನವದೆಹಲಿ: ‘ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸ್ವದೇಶಿ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್‌ನಲ್ಲಿ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಗುರುವಾರ ಹಾರಾಟ ನಡೆಸಲಿದ್ದಾರೆ’ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಉತ್ಪನ್ನಗಳ ಪ್ರದರ್ಶನದಲ್ಲಿಯೂ ಅವರು ಪಾಲ್ಗೊಳ್ಳಲಿದ್ದಾರೆ.

‘ವಾಯುಪಡೆ ಈಗಾಗಲೇ ತೇಜಸ್‌ ವಿಮಾನಗಳನ್ನು ಸೇವೆಗೆ ನಿಯೋಜಿಸಿದೆ. ಈ ವಿಮಾನಗಳನ್ನು ನೌಕಾಪಡೆಗೂ ಬಳಸುವ ಸಲುವಾಗಿ ವಿನ್ಯಾಸ ಕಾರ್ಯ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ರಾಜನಾಥ್ ಅವರು ಎರಡು ಸೀಟುಗಳ ಈ ತೇಜಸ್‌ ವಿಮಾನದಲ್ಲಿ ಹಾರಾಟ ನಡೆಸುವ ಮೊದಲ ರಕ್ಷಣಾ ಸಚಿವರಾಗಲಿದ್ದಾರೆ.

ಪ್ರತಿಕ್ರಿಯಿಸಿ (+)