ಶುಕ್ರವಾರ, ನವೆಂಬರ್ 15, 2019
22 °C
ರೈಲಿನಲ್ಲಿ ಚೈನ್‌ ಎಳೆದ ಪ್ರಕರಣ * 20 ವರ್ಷಕ್ಕೂ ಹೆಚ್ಚು ಹಿಂದಿನ ಪ್ರಕರಣ

ಸನ್ನಿ ಡಿಯೋಲ್‌, ಕರಿಷ್ಮಾ ಕಪೂರ್‌ ವಿರುದ್ಧ ಆರೋಪಪಟ್ಟಿ

Published:
Updated:
Prajavani

ಜೈಪುರ: ಬಾಲಿವುಡ್ ನಟ ಹಾಗೂ ರಾಜಕಾರಣಿ ಸನ್ನಿ ಡಿಯೋಲ್‌ ಮತ್ತು ನಟಿ ಕರಿಷ್ಮಾ ಕಪೂರ್‌ ವಿರುದ್ಧ ರೈಲ್ವೆ ನ್ಯಾಯಾಲಯ ಆರೋಪಪಟ್ಟಿ ಸಿದ್ಧಪಡಿಸಿದೆ. 20 ಕ್ಕೂ ಹೆಚ್ಚು ವರ್ಷದ ಹಿಂದೆ ರೈಲಿನಲ್ಲಿ ಪ್ರಯಾಣಿಸುವಾಗ ತುರ್ತು ಚೈನ್ ಎಳೆದ ಆರೋಪ ಇವರ ಮೇಲಿದೆ.

ಈ ಇಬ್ಬರೂ ಸೆಷೆನ್ಸ್‌ ಕೋರ್ಟ್‌ನಲ್ಲಿ ಬುಧವಾರ ತಮ್ಮ ಮೇಲಿನ ಆರೋಪವನ್ನು ಪ‍್ರಶ್ನಿಸಿದ್ದಾರೆ ಎಂದು ವಕೀಲ ಎ.ಕೆ.ಜೈನ್ ಹೇಳಿದ್ದಾರೆ.

1997 ರಲ್ಲಿ ಡಿಯೋಲ್‌ ಮತ್ತು ಕಪೂರ್‌ ಹಾಗೂ ಇತರರು ರಾಜಸ್ಥಾನದ ಅಜ್ಮೀರ್‌ ಜಿಲ್ಲೆಯ ಫುಲೇರಾ ಸಮೀಪದ ಸನ್‌ವರ್ದಾ ಎಂಬಲ್ಲಿಗೆ ‘ಭಜರಂಗ್‌’ ಚಿತ್ರ ಚಿತ್ರೀಕರಣಕ್ಕಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಇಬ್ಬರೂ ಕಲಾವಿದರು ರೈಲಿನ ಚೈನ್‌ ಎಳೆದಿದ್ದಾರೆ. ಇದರಿಂದ ರೈಲು 25 ನಿಮಿಷ ವಿಳಂಬವಾಗಿದೆ ಎಂಬ ಆರೋಪವಿದೆ. ಇಬ್ಬರ ಜತೆ ಸಾಹಸ ನಿರ್ದೇಶಕ ಟಿನು ವರ್ಮಾ ಮತ್ತು ಸತೀಶ್‌ ಷಾ ಅವರನ್ನೂ ಆರೋಪಿಗಳಾಗಿ ಮಾಡಲಾಗಿದೆ. ಇವರು ಮಾತ್ರ ತಮ್ಮ ಮೇಲಿನ ಆರೋಪವನ್ನು ಸೆಷೆನ್ಸ್ ಕೋರ್ಟ್‌ನಲ್ಲಿ 2010ರಲ್ಲಿ ಪ್ರಶ್ನಿಸಿಲ್ಲ.

ಇಬ್ಬರ ವಿರುದ್ಧ 2009 ರಲ್ಲಿ ಮೊದಲ ಬಾರಿಗೆ ಆರೋಪಪಟ್ಟಿಯನ್ನು ಸಲ್ಲಿಸಲಾಗಿತ್ತು. ಅದನ್ನು 2010 ರಲ್ಲಿ ಪ್ರಶ್ನಿಸಿಲಾಗಿತ್ತು ಎಂದು ವಕೀಲರು ಹೇಳಿದ್ದಾರೆ. 

ಇಬ್ಬರನ್ನೂ ಸೆಷೆನ್ಸ್ ಕೋರ್ಟ್‌ ದೋಷಮುಕ್ತಗೊಳಿಸಿತ್ತು. ಆದರೆ ಸೆ.17 ರಂದು ರೈಲ್ವೆ ನ್ಯಾಯಾಲಯ ಮತ್ತೊಮ್ಮೆ ಆರೋಪ ಹೊರಿಸಿತು. ಮುಂದಿನ ವಿಚಾರಣೆಯನ್ನು ರೈಲ್ವೆ ನ್ಯಾಯಾಲಯ ಇದೇ 24 ಕ್ಕೆ ನಿಗದಿಪಡಿಸಿದೆ. 

 ಸಹಾಯಕ ಸ್ಟೇಷನ್‌ ಮಾಸ್ಟರ್‌ ಸೀತಾರಾಮ ಮಾಲಕರ್‌ ಅವರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು. 

 

ಪ್ರತಿಕ್ರಿಯಿಸಿ (+)