ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮೂಹ ಸಾರಿಗೆಯಲ್ಲಿ ಡಿಜಿಟಲ್‌ ಪಾವತಿ

ಸೋಂಕು ತಡೆಗಟ್ಟಲು ಮೋಟರ್‌ರಹಿತ ವಾಹನ ಬಳಕೆ: ಕೇಂದ್ರದ ಸಲಹೆ
Last Updated 13 ಜೂನ್ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಸೋಂಕು ಹರಡದಂತೆ ತಡೆಗಟ್ಟಲು ಸಮೂಹ ಸಾರಿಗೆಯಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಮತ್ತು ಮೋಟರ್‌ ರಹಿತ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕು ಎಂದು ಕೇಂದ್ರವು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಿದೆ.

‘ಭೀಮ್‌, ಫೋನ್‌ ಪೇ, ಗೂಗಲ್‌ ಪೇ ಮುಂತಾದ ಸ್ಪರ್ಶಮತ್ತು ನಗದು ರಹಿತ ಪಾವತಿ ವ್ಯವಸ್ಥೆ, ಚತುರ ಸಾರಿಗೆ ವ್ಯವಸ್ಥೆ, ನ್ಯಾಷನಲ್‌ ಕಾಮನ್‌ ಮೊಬಿಲಿಟಿ ಕಾರ್ಡ್‌ (ಎನ್‌ಸಿಎಂಸಿ) ಮುಂತಾದ ತಂತ್ರಜ್ಞಾನಗಳ ಬಳಕೆಯಿಂದ ಮನುಷ್ಯರ ಮಧ್ಯೆ ಸಂಪರ್ಕವನ್ನು ಕಡಿಮೆ ಮಾಡಬಹುದು’ ಎಂದು ಕೇಂದ್ರ ನಗರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಪಟ್ಟಣಗಳಲ್ಲಿ ಸಮೂಹ ಸಾರಿಗೆಯು ಬಡ ಮತ್ತು ಮಧ್ಯಮ ವರ್ಗದ ಜನರ ಪ್ರಯಾಣದ ಪ್ರಮುಖ ಮಾಧ್ಯಮ. ಅಲ್ಲಿ ನೈರ್ಮಲ್ಯ ಹಾಗೂ ಅಂತರ ಕಾಯ್ದುಕೊಳ್ಳುವಂತಹ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದು ಅಗತ್ಯ. ಅಂತರ ಕಾಯ್ದುಕೊಳ್ಳುವ ನಿಯಮದಿಂದಾಗಿ ಮೆಟ್ರೊ ಹಾಗೂ ಬಸ್‌ಗಳ ಒಟ್ಟು ಸಾಮರ್ಥ್ಯದ ಶೇ 20ರಿಂದ ಶೇ 50ರಷ್ಟು ಪ್ರಮಾಣ ಮಾತ್ರ ಬಳಕೆಗೆ ಸಾಧ್ಯವಾಗುತ್ತಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ರೂಪಿಸುವುದು ಅಗತ್ಯವಾಗಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ಅನೇಕ ರಾಷ್ಟ್ರಗಳಲ್ಲಿ ಈಗ ವಿದ್ಯುತ್‌ ಚಾಲಿತ ದ್ವಿಚಕ್ರವಾಹನ, ಸೈಕಲ್‌ನಂತಹ ಮೋಟರ್‌ರಹಿತ ವಾಹನಗಳ ಬಳಕೆಗೆ ಉತ್ತೇಜನ ನೀಡಲಾಗುತ್ತಿದೆ. ರಸ್ತೆಗಳಲ್ಲಿ ಇಂಥ ವಾಹನಗಳ ನಿಲುಗಡೆ, ಚಾರ್ಜಿಂಗ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ನ್ಯೂಯಾರ್ಕ್‌ ನಗರದಲ್ಲಿ ಇಂಥ ವಾಹನಗಳಿಗಾಗಿಯೇ ಸುಮಾರು 40 ಮೈಲು ಉದ್ದದ ಪ್ರತ್ಯೇಕ ಲೇನ್‌ ಸಿದ್ಧಪಡಿಸಲಾಗಿದೆ. ಆಕ್ಲಂಡ್‌ನಲ್ಲಿ ರಸ್ತೆಯಶೇ10ರಷ್ಟು ಭಾಗವನ್ನು ಮೋಟರ್‌ ರಹಿತ ವಾಹನಗಳಿಗೆ ಮೀಸಲಿಡಲಾಗಿದೆ. ಚೀನಾದಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಬೈಕ್‌ ಷೇರಿಂಗ್‌ ಪ್ರಮಾಣವು
ಶೇ 150ರಷ್ಟು ಹೆಚ್ಚಾಗಿದೆ ಎಂದೂ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT