ಶನಿವಾರ, ನವೆಂಬರ್ 23, 2019
17 °C

ಭಾರತೀಯ ಗೋವುಗಳ ಹಾಲಿನಲ್ಲಿ ಬಂಗಾರವಿದೆ: ಬಿಜೆಪಿ ಮುಖಂಡ ದಿಲೀಪ್‌ ಘೋಷ್‌

Published:
Updated:

ಕೋಲ್ಕತ್ತ: ಭಾರತೀಯ ತಳಿಯ ಗೋವುಗಳ ಹಾಲಿನಲ್ಲಿ ಬಂಗಾರವಿದ್ದು ಆ ಕಾರಣಕ್ಕೆ ಹಾಲು ಸ್ವಲ್ಪ ಹಳದಿಯಿಂದ ಕೂಡಿರುತ್ತದೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್‌ ಘೋಷ್‌ ಹೇಳಿದ್ದಾರೆ. 

ಇಲ್ಲಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಇದನ್ನೂ ಓದಿ: ಗೋಮಾಂಸ ಮಾತ್ರವೇಕೆ, ನಾಯಿ ಮಾಂಸವನ್ನೂ ತಿನ್ನಿ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ

ಭಾರತೀಯ ತಳಿಯ ಹಸುವಿನ ಹಾಲು ಸತ್ವಗುಣಗಳಿಂದ ಕೂಡಿದೆ. ನಮ್ಮ ಗೋವಿನ ಹಾಲಿನಲ್ಲಿ ಬಂಗಾರ ಸೇರಿರುವುದರಿಂದಲೇ ಹಾಲು ಸ್ವಲ್ಪ ತಿಳಿ ಹಳದಿಯಾಗಿ ಕಾಣುತ್ತದೆ ಎಂದು ಹೇಳಿದ್ದಾರೆ.

ಹಸುವಿನ ಹೊಕ್ಕಳು ಬಂಗಾರ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ದಿಲೀಪ್ ಘೋಷ್‌ ಹೇಳಿದ್ದಾರೆ. 

ಪ್ರತಿಕ್ರಿಯಿಸಿ (+)