ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಲಂಗಾಣ: ವಿಷಯುಕ್ತ ಆಹಾರ ಸೇವಿಸಿ 3 ಮಕ್ಕಳು ಸಾವು; 24 ಮಂದಿ ಅಸ್ವಸ್ಥ 

Last Updated 9 ಮೇ 2019, 11:09 IST
ಅಕ್ಷರ ಗಾತ್ರ

ಹೈದರಾಬಾದ್: ತೆಲಂಗಾಣದ ಅದಿಲಾಬಾದ್ ಜಿಲ್ಲೆಯಲ್ಲಿ ವಿಷಯುಕ್ತ ಆಹಾರ ಸೇವಿಸಿ ಮೂವರು ಮಕ್ಕಳು ಪ್ರಾಣ ಕಳೆದುಕೊಂಡಿದ್ದು, 24 ಮಂದಿ ಅಸ್ವಸ್ಥರಾಗಿದ್ದಾರೆ.

ಸುದ್ದಿಮೂಲಗಳ ಪ್ರಕಾರ ಇಲ್ಲಿನ ನರ್ನೂಲ್ ಬ್ಲಾಕ್‌ನ ಕೋತಪಲ್ಲಿ ಎಚ್ ಗ್ರಾಮದಲ್ಲಿರುವ ಕೋಲಂಗುಡದಸಣ್ಣ ಹಳ್ಳಿಯ ಬುಡಕಟ್ಟು ಕುಟುಂಬವೊಂದು ಮಂಗಳವಾರ ಮದುವೆ ಔತಣ ಏರ್ಪಡಿಸಿತ್ತು.ಮದುವೆಗೆ ಆಗಮಿಸಿದ್ದ ಅತಿಥಿಗಳು ರಾತ್ರಿಯ ಔತಣದಲ್ಲಿ ಉಳಿದಿದ್ದ ಮಾಂಸಾಹಾರವನ್ನು ಬುಧವಾರ ಬೆಳಗ್ಗೆಯೂ ಸೇವಿಸಿದ್ದರು.

ಆಹಾರ ಸೇವಿಸಿವರಿಗೆ ವಾಂತಿಯಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ.ಆಹಾರ ಸೇವಿಸಿದ್ದ ಸಿದಾಮ್ ಆಯು ಎಂಬ ಎರಡು ವರ್ಷದ ಪುಟಾಣಿ ಮೃತಪಟ್ಟಿದ್ದು,ತಕ್ಷಣ ಜಾಗೃತರಾದ ಗ್ರಾಮಸ್ಥರುಅಸ್ವಸಸ್ಥರಾಗಿದ್ದ ಜನರನ್ನು ನರ್ನೂರ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.

ಅಲ್ಲಿ ಮೂರು ವರ್ಷದ ಪುಟಾಣಿ ಸಿದಾಮ್ ಚಿನ್ನು ಬಾಯಿ ಮೃತಪಟ್ಟಿದ್ದಾಳೆ.

ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಕೂಡಲೇ ರೋಗಿಗಳನ್ನು ಉತ್ನೂರ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಗಿದೆ.ಅಲ್ಲಿ ಒಂದು ವರ್ಷದ ಬಾಲಕ ಕೊದಪ ಸುಪ್ಪಾರಿ ಮೃತ ಪಟ್ಟಿದ್ದಾನೆ.

ಕೆಲವು ರೋಗಿಗಳನ್ನು ಆರ್‌ಐಎಂಎಸ್ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಅದಿಲಾಬಾದ್ ಜಿಲ್ಲಾ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಡಾ, ರಾಜೀವ್ ರಾಜು ಅವರ ಪ್ರಕಾರ ಆರ್‌ಐಎಂಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 15 ಮಕ್ಕಳು ಸೇರಿದಂತೆ 24 ಮಂದಿಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಇಬ್ಬರು ರೋಗಿಗಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದು, ಅವರ ಆರೋಗ್ಯ ಸ್ಥಿತಿ ಬಗಗೆ ನಿಗಾ ವಹಿಸಲಾಗಿದೆ.

ಆಹಾರ ಮತ್ತು ನೀರಿನ ಮಾದರಿಯನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳಿಸಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಡಾ. ರಾಜು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT