ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಬ್ಬಕ ರಕ್ಷಣೆಗೆ ಕೊನೆಯ ಅವಕಾಶ

Last Updated 13 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಮುಂಬೈ: ಸ್ವತಂತ್ರ ಭಾರತದಲ್ಲಿ ಅವಸಾನದ ಅಂಚಿನಲ್ಲಿರುವ ಮೊದಲ ಪ್ರಭೇದ ಹೆಬ್ಬಕ (ಗ್ರೇಟ್‌ ಇಂಡಿಯನ್‌ ಬಸ್ಟರ್ಡ್‌– ಜಿಐಬಿ) ಆಗಿದೆ ಎಂದು ತಜ್ಞರು ಹೇಳಿದ್ದಾರೆ.

ವಿಶ್ವದಲ್ಲಿಯೇ ಹೆಬ್ಬಕಗಳ ಸಂಖ್ಯೆ 150ಕ್ಕಿಂತ ಕಡಿಮೆ ಇದೆ. ಭಾರತದಲ್ಲಿ ರಾಜಸ್ಥಾನದಲ್ಲಿ ಹೆಚ್ಚಿದ್ದವು. ನಂತರದ ಸ್ಥಾನ ಗುಜರಾತ್‌ ಇತ್ತು. ಈಗ ಅಲ್ಲಿಯೂ ಶೇ 95 ರಷ್ಟು ಹೆಬ್ಬಕಗಳ ಸಂಖ್ಯೆ ಕುಸಿದಿದೆ.

5,000 ಜನರ ಬೆಂಬಲ

ಚಿತ್ರನಟಿ ದಿಯಾ ಮಿರ್ಜಾ, ಮಾಜಿ ಕ್ರಿಕೆಟಿಗ ಅನೀಲ ಕುಂಬ್ಳೆ ಸೇರಿದಂತೆಈ ಪ್ರಚಾರ ಆಂದೋಲನ ಆರಂಭವಾಗಿ ಕೆಲವೇ ದಿನಗಳಲ್ಲಿ 5,000 ಜನರು ಬೆಂಬಲ ವ್ಯಕ್ತಪಡಿಸಿ, ಆನ್‌ಲೈನ್‌ ಮೂಲಕ ಕೇಂದ್ರದ ಇಂಧನ ಸಚಿವ ಆರ್‌.ಕೆ.ಸಿಂಗ್‌ ಅವರಿಗೆ ಸಲ್ಲಿಸಿರುವ ಅರ್ಜಿಗೆ ಸಹಿ ಹಾಕಿದ್ದಾರೆ.

ಪ್ರಚಾರ ಆಂದೋಲನ

ಅಳಿವಿನಂಚಿನಲ್ಲಿರುವ ಹೆಬ್ಬಕಗಳನ್ನು ಉಳಿಸಲು ಮೂರು ವನ್ಯಜೀವಿ ಸಂಘಟನೆಗಳು ಒಂದು ತುರ್ತು ಪ್ರಚಾರ ಆಂದೋಲನ ಆರಂಭಿಸಿವೆ.ದಿ ಕಾರ್ಬೆಟ್ ಫೌಂಡೇಶನ್ ಭಾರತದ ಸಂರಕ್ಷಣಾ ಮತ್ತು ಅಭಯಾರಣ್ಯ ನೈಸರ್ಗಿಕ ಫೌಂಡೇಶನ್ ಸಹಯೋಗದೊಂದಿಗೆ ಈ ಆಂದೋಲನ ಪ್ರಾರಂಭಿಸಿದೆ.

ಹೆಬ್ಬಕಗಳಿಗೆ ಏನು ಮಾರಕ?

ಹೆಬ್ಬಕಗಳ ಆವಾಸಸ್ಥಾನದಲ್ಲಿ ಎತ್ತರದ ಮೇಲೆ ಹಾಕಿರುವ ವಿದ್ಯುತ್‌ ಮಾರ್ಗಗಳಿಂದ ಈ ಪ್ರಭೇದಗಳು ಬದುಕುಳಿಯಲು ಕಷ್ಟ. ಆದ್ದರಿಂದ ಈ ಪ್ರಭೇದಗಳಿರುವ ಕಡೆಗಳಲ್ಲಿ ವಿದ್ಯುತ್‌ ತಂತಿಗಳನ್ನು ನೆಲದಡಿಯಲ್ಲಿ ಹಾಕಬೇಕು ಎಂದು ಈ ಸಂಸ್ಥೆಗಳು ಒತ್ತಾಯಿಸಿವೆ.ಹೆಬ್ಬಕಗಳು ಸೀಮಿತ ದೃಷ್ಟಿ ಹೊಂದಿದ್ದು, ಕಡಿಮೆ ಅಂತರದಲ್ಲಿ ಹಾರುವ ಹಕ್ಕಿಗಳಾಗಿವೆ. ಮೇಲಿಂದ ಮೇಲೆ ವಿದ್ಯುತ್‌ ತಂತಿಗೆ ತಗುಲಿ ಸಾವನ್ನಪ್ಪುತ್ತಿವೆ. ಕೇಂದ್ರದ ಇಂಧನ ಸಚಿವಾಲಯ ಈ ಅಪಾಯಕಾರಿ ವಿದ್ಯುತ್‌ ಮಾರ್ಗಗಳನ್ನು ಸುರಕ್ಷಿತವಾಗಿ ನೆಲದಡಿಯಲ್ಲಿ ಅಳವಡಿಸಬೇಕು ಎಂದು ಪ್ರಚಾರ ಆಂದೋಲನ ಆರಂಭಿಸಿವೆ. ಈ ಪ್ರಭೇದಗಳ ಸಂರಕ್ಷಣೆಗೆ ಭಾರತೀಯ ವನ್ಯಜೀವಿ ಸಂಸ್ಥೆ ಸಹ ಇದನ್ನೇ ಶಿಫಾರಸು ಮಾಡಿದೆ.

‘ಎಲ್ಲರ ಸಹಕಾರ ಅಗತ್ಯ’

‘ವೈಜ್ಞಾನಿಕ ಜ್ಞಾನ ಹಾಗೂ ಆರ್ಥಿಕ ಸಂಪನ್ಮೂಲ ಲಭ್ಯವಿದ್ದರೂ ಅವಸಾನದ ಅಂಚಿನಲ್ಲಿರುವ ಹೆಬ್ಬಕಗಳನ್ನು ರಕ್ಷಿಸಲು ಆಗುತ್ತಿಲ್ಲ. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಆದಂತೆ. ರಾಜಕಾರಣಿಗಳು, ನೀತಿ ನಿರೂಪಕರು, ಕಾರ್ಪೋರೇಟ್‌ ಕ್ಷೇತ್ರ ಮತ್ತು ಸಾರ್ವಜನಿಕರು ಹೆಬ್ಬಕಗಳನ್ನು ರಕ್ಷಿಸಲು ಮುಂದಾಗಬೇಕು. ನಮಗಿರುವ ಕೊನೆಯ ಅವಕಾಶ ಇದಾಗಿದೆ. ಹೆಬ್ಬಕಗಳಿಗೆ ಸಾಕಷ್ಟು ಆವಾಸಸ್ಥಾನ, ಹಾರಾಡಲು ಸುರಕ್ಷಿತ ಸ್ಥಳ ಹಾಗೂ ವಿಷ ರಹಿತ ಆಹಾರ ಒದಗಿಸುವ ಮೂಲಕ ಅವುಗಳ ಸಂಖ್ಯೆ ಹೆಚ್ಚಿಸಲು ಎಲ್ಲರ ಸಹಕಾರ ಅಗತ್ಯ’ ಎಂದು ಕಾರ್ಬೆಟ್‌ ಫೌಂಡೇಶನ್‌ ನಿರ್ದೇಶಕ ಕೇದಾರ್‌ ಗೋರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT