ಮತದಾನೋತ್ತರ ಸಮೀಕ್ಷೆ: ರಾಜಸ್ಥಾನ, ಛತ್ತೀಸ್‌ಗಡ ಕಾಂಗ್ರೆಸ್‌, ಮಧ್ಯಪ್ರದೇಶ ಬಿಜೆಪಿ

7

ಮತದಾನೋತ್ತರ ಸಮೀಕ್ಷೆ: ರಾಜಸ್ಥಾನ, ಛತ್ತೀಸ್‌ಗಡ ಕಾಂಗ್ರೆಸ್‌, ಮಧ್ಯಪ್ರದೇಶ ಬಿಜೆಪಿ

Published:
Updated:

ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ, ತೆಲಂಗಾಣ ಛತ್ತೀಸ್‌ಗಡ ಹಾಗೂ ಮಿಜೋರಾಂ ರಾಜ್ಯಗಳಲ್ಲಿನ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು ಛತ್ತೀಸ್‌ಗಡ, ರಾಜಸ್ಥಾನದಲ್ಲಿ ಕಾಂಗ್ರೆಸ್‌, ಮಧ್ಯಪ್ರದೇಶದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಟಿಆರ್‌ಎಸ್‌, ಮಿಜೋರಾಂನಲ್ಲಿ   ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

ರಾಜಸ್ಥಾನದಲ್ಲಿ ಒಟ್ಟು 199 ವಿಧಾನಸಭಾ ಸ್ಥಾನಗಳಿವೆ. ಕಾಂಗ್ರೆಸ್‌ ಸರಳ ಬಹುಮತ ಪಡೆಯಲಿದೆ ಎಂದು ಸಮೀಕ್ಷೆಗಳ ಹೇಳಿವೆ. ಟೈಮ್ಸ್‌ ನೌ, ಜನ್‌ ಕೀ ಬಾತ್‌, ಇಂಡಿಯಾ ಟುಡೆ ಹಾಗೂ ಸಿವೋಟರ್ ಸಮಿಕ್ಷೆಗಳು ಕಾಂಗ್ರೆಸ್ ಸರಳ ಬಹುಮತ ಪಡೆಯಲಿದೆ ಎಂದು ಹೇಳಿವೆ. 

230 ಸ್ಥಾನಗಳ ಮಧ್ಯಪ್ರದೇಶದಲ್ಲಿ ಬಿಜೆಪಿ ಸರಳ ಬಹುಮತ ಪಡೆಯಲಿದ್ದು ಕಾಂಗ್ರೆಸ್‌ ತನ್ನ ಶಕ್ತಿಯನ್ನು ವೃದ್ದಿಸಿಕೊಳ್ಳಲಿದೆ ಎಂದು ಸಮೀಕ್ಷೆಗಳ ತಿಳಿಸಿವೆ. ಕಾಂಗ್ರೆಸ್‌ ಗೆಲುವಿನ ಸನಿಹಕ್ಕೆ ಬರಲಿದೆ ಎಂದು ಮತದಾನೋತ್ತರ ಸಮೀಕ್ಷೆಯ ಒಟ್ಟಾರೆ ಸಾರ. ಜನ್‌ ಕೀ ಬಾತ್‌, ಇಂಡಿಯಾ ಟುಡೆ, ಟೈಮ್ಸ್‌ ನೌ ಸಮೀಕ್ಷೆಗಳು ಬಿಜೆಪಿ ಸರಳ ಬಹುಮತ ಪಡೆಯಲಿದೆ ಎಂದು ಹೇಳಿವೆ. 

ಇದನ್ನೂ ಓದಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಡದಲ್ಲಿ ಬಿಜೆಪಿ ಕಾಂಗ್ರೆಸ್‌ ತೀವ್ರ ಪೈಪೋಟಿ

90 ಸ್ಥಾನಗಳ ಛತ್ತೀಸ್‌ಗಡದಲ್ಲಿ ಸರಳ ಬಹುಮತಕ್ಕೆ ಯಾವುದೇ ಪಕ್ಷ 46 ಸ್ಥಾನಗಳನ್ನು ಗೆಲ್ಲಬೇಕು. ಟೈಮ್ಸ್‌ನೌ, ಇಂಡಿಯಾ ಟಿವಿ ಸಮೀಕ್ಷೆಗಳು ಬಿಜೆಪಿ ಸರಳ ಬಹುಮತ ಪಡೆಯಲಿದೆ ಎಂದು ಹೇಳಿವೆ. ಆದರೆ ಸಿ ವೋಟರ್ಸ್‌, ಇಂಡಿಯಾ ಟುಡೆ, ನ್ಯೂಸ್‌ ನೇಷನ್‌ ಮತ್ತು ನ್ಯೂಸ್‌ 24 ಸಮೀಕ್ಷೆಗಳು ಕಾಂಗ್ರೆಸ್‌ ಸರಳ ಬಹುಮತ ಪಡೆಯಲಿವೆ ಎಂದು ಹೇಳಿವೆ. ಇಂಡಿಯಾ ನ್ಯೂಸ್‌, ನ್ಯೂಸ್‌ ನೇಷನ್ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ತಿಳಿಸಿವೆ. 

ದಕ್ಷಿಣ ಭಾಗದ ತೆಲಂಗಾಣ ರಾಜ್ಯದಲ್ಲಿ ಟಿಆರ್‌ಎಸ್‌ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಜನ್‌ ಕೀ ಬಾತ್‌, ಟೈಮ್ಸ್‌ ನೌ, ಇಂಡಿಯಾ ಟುಡೆ, ಟಿವಿ9 ತೆಲುಗು ಹಾಗೂ ಟಿವಿ5 ಸಮೀಕ್ಷೆಗಳು ಟಿಆರ್‌ಎಸ್‌  ಸರಳ ಬಹುಮತ ಪಡೆದು ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ. ಕಾಂಗ್ರೆಸ್‌ ಮಿತ್ರ ಪಕ್ಷಗಳು 30 ರಿಂದ 35 ಸ್ಥಾನಗಳನ್ನು ಪಡೆಯಲಿವೆ. ಬಿಜೆಪಿ 4 ರಿಂದ 7 ಸ್ಥಾನ ಪಡೆಯುವ ಸಾಧ್ಯತೆ ಇದೆ.

ಈಶಾನ್ಯ ಭಾಗದ ಮಿಜೋರಾಂ ರಾಜ್ಯದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಸಿವೋಟರ್ಸ್‌ ಸಮೀಕ್ಷೆ ಹೇಳಿದೆ. ಆಡಳಿತ ರೂಢ ಕಾಂಗ್ರೆಸ್‌ 15 ರಿಂದ 18 ಸ್ಥಾನ ಪಡೆದರೆ, ಎಂಎನ್‌ಎಫ್‌ 18 ರಿಂದ 20 ಸ್ಥಾನಪಡೆಯಲಿದೆ ಎಂದು ಸಮೀಕ್ಷೆ ಹೇಳಿದೆ. ಈ ಸಲವು ಬಿಜೆಪಿ ಖಾತೆ ತೆರೆಯುವುದು ಕಷ್ಟ ಎಂದು ಸಮೀಕ್ಷೆಗಳು ಹೇಳಿವೆ. 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 3

  Sad
 • 0

  Frustrated
 • 1

  Angry

Comments:

0 comments

Write the first review for this !