‘ನನ್ನ ಪ್ರಧಾನಿ ಕಳ್ಳ’ ಎನ್ನುವ ಈ ಫೋಟೊ ನಕಲಿ

7

‘ನನ್ನ ಪ್ರಧಾನಿ ಕಳ್ಳ’ ಎನ್ನುವ ಈ ಫೋಟೊ ನಕಲಿ

Published:
Updated:

ಬೆಂಗಳೂರು: ಕೆಲ ಮಹಿಳೆಯರು ‘ಮೋದಿ ಚೋರ್’ (ಮೋದಿ ಕಳ್ಳ) ಎನ್ನುವ ಪ್ಲಕಾರ್ಡ್ ಹಿಡಿದಿರುವ ಚಿತ್ರವನ್ನು ‘ಕಳೆದ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಜನರು ಪ್ರಧಾನಿಯನ್ನು ಕಳ್ಳ ಎಂದು ಹೀಗಳೆಯುತ್ತಿದ್ದಾರೆ’ ಎಂಬ ಒಕ್ಕಣೆಯೊಂದಿಗೆ ಎಬಿಎಂಬಿ ಫೇಸ್‌ಬುಕ್ ಪೇಜ್ ಸೆ.23ರಂದು ಪ್ರಕಟಿಸಿತ್ತು. ಈವರೆಗೆ (ಅ.1) ಈ ಚಿತ್ರವು 21 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. 275 ಕಾಮೆಂಟ್, 1,200ಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಎಬಿಎಂಬಿ ಫೇಸ್‌ಬುಕ್ ಪುಟಕ್ಕೆ 40,128 ಫಾಲೊವರ್ಸ್ ಇದ್ದಾರೆ.

ಇದೇ ಚಿತ್ರವನ್ನು ಹಲವು ಫೇಸ್‌ಬುಕ್ ಪೇಜ್‌ ಮತ್ತು ವೈಯಕ್ತಿಕ ಖಾತೆಗಳಲ್ಲಿ ಶೇರ್ ಮಾಡಲಾಗಿತ್ತು. 19 ಲಕ್ಷ ಫಾಲೊಯರ್ಸ್ ಇರುವ The Headline (ದಿ ಹೆಡ್‌ಲೈನ್), 17 ಲಕ್ಷ ಫಾಲೊಯರ್ಸ್ ಇರುವ आजमगढ़ एक्सप्रेस (ಅಝ್ಮಾಗರ್ ಎಕ್ಸ್‌ಪ್ರೆಸ್), 8 ಲಕ್ಷ ಫಾಲೊಯರ್ಸ್ ಇರುವ Love you India (ಲವ್ ಯು ಇಂಡಿಯಾ) ಫೇಸ್‌ಬುಕ್ ಪೇಜ್‌ಗಳು ಈ ಚಿತ್ರವನ್ನು ಶೇರ್ ಮಾಡಿವೆ. ಈ ಮೂಲಕ ಈ ಚಿತ್ರವು ಸಾವಿರಾರು ಜನರ ಕಣ್ಣಿಗೆ ಬಿದ್ದಿದೆ. ಹಲವು ಟ್ವಿಟರ್ ಖಾತೆಗಳಲ್ಲಿಯೂ ಈ ಚಿತ್ರ ಕಂಡುಬಂದಿದೆ.

ನಿಜ ಏನು?

ಈ ಚಿತ್ರದ ಸತ್ಯಾಸತ್ಯತೆ ಪರಿಶೀಲಿಸಲು ‘ಆಲ್ಟ್‌ ನ್ಯೂಸ್’ ಜಾಲತಾಣ ಪ್ರಯತ್ನಿಸಿತು. ಗೂಗಲ್‌ನಲ್ಲಿ ಚಿತ್ರವನ್ನು ರಿವರ್ಸ್‌ ಸರ್ಚ್ ಮಾಡಿದಾಗ ಸತ್ಯ ಬಯಲಾಯಿತು. ಈ ಚಿತ್ರದೊಂದಿಗೆ ಒಂದಿಷ್ಟು ವರದಿಗಳನ್ನೂ ಗೂಗಲ್ ಹೆಕ್ಕಿ ಕೊಟ್ಟಿತು. ಅವುಗಳ ಪೈಕಿ, ‘ಆಜ್‌ತಕ್’ ಜಾಲತಾಣದಲ್ಲಿದ್ದ ವರದಿಯೂ ಒಂದು. ‘ಪ್ರಜಾವಾಣಿ’ ವರದಿಗಾರರು ಇದೇ ಚಿತ್ರವನ್ನು ರಿವರ್ಸ್‌ ಇಮೇಜ್ ಸರ್ಚ್ ಮಾಡಿದಾಗ ‘ಫಸ್ಟ್‌ಪೋಸ್ಟ್’ ಜಾಲತಾಣದಲ್ಲಿದ್ದ ಆಯುಷ್ಮಾನ್ ಭಾರತ್ ಯೋಜನೆ ಉದ್ಘಾಟನೆ ಸಮಾರಂಭದ ವರದಿ (Narendra Modi launches Ayushman Bharat scheme to provide health insurance cover to 50 crore benefeciaries) ವರದಿ ಲಭ್ಯವಾಯಿತು.


ಇದು ‘ಫಸ್ಟ್‌ಪೋಸ್ಟ್‌’ನಲ್ಲಿ ಸಿಕ್ಕ ಮೂಲಚಿತ್ರ

‘ಆಜ್‌ತಕ್‌’ನಲ್ಲಿ ಸೆ.23ರಂದು ಪ್ರಕಟವಾಗಿದ್ದ ವರದಿಯು ಮೂಲ ಚಿತ್ರವನ್ನು ಹೊಂದಿದೆ. ಈ ಚಿತ್ರದಲ್ಲಿರುವ ಒಂದಿಷ್ಟು ಮಹಿಳೆಯರು प्रधानमंत्री जन आरोग्य योजना (ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ) ಎಂದು ಬರೆದುಕೊಂಡಿರುವ ಪ್ಲಕಾರ್ಡ್‌ಗಳನ್ನು ಕೈಲಿ ಹಿಡಿದುಕೊಂಡಿದ್ದಾರೆ.

ಸೆ.23ರಂದು ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ‘ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ– ಆಯುಷ್ಮಾನ್ ಭಾರತ್‌’ಗೆ ಚಾಲನೆ ನೀಡಿದ್ದರು. ‘ಈ ಯೋಜನೆಯಿಂದ ದೇಶದ 10 ಕೋಟಿ ಕುಟುಂಬಗಳಿಗೆ ಉತ್ತಮ ಆರೋಗ್ಯ ಸೇವೆ ಸಿಗಲಿದೆ. ಸುಮಾರು 50 ಕೋಟಿ ಜನರಿಗೆ ಅನುಕೂಲವಾಗಲಿದೆ’ ಎಂದು ಆಜ್‌ತಕ್ ಈ ಚಿತ್ರದ ಜೊತೆಗೆ ಪ್ರಕಟಿಸಿರುವ ವರದಿಯಲ್ಲಿ ಹೇಳಿದೆ.

ಮೂಲ ವರದಿಗೆ ವ್ಯತಿರಿಕ್ತ ಅರ್ಥ ಬರುವಂತೆ ಚಿತ್ರವನ್ನು ತಿರುಚಿ, ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲಾಗಿದೆ. ಇಂಥ ಹಲವು ಪ್ರಕರಣಗಳು ಈ ಹಿಂದೆಯೂ ವರದಿಯಾಗಿವೆ. ಜನರು ಕೈಲಿ ಪೋಸ್ಟರ್, ಪ್ಲಕಾರ್ಡ್ ಅಥವಾ ಫಲಕಗಳನ್ನು ಹಿಡಿದಿರುವ ಚಿತ್ರಗಳಲ್ಲಿ ಅಕ್ಷರಗಳನ್ನು ಬದಲಿಸಿ ಶೇರ್ ಮಾಡುವುದು ಸಾಮಾನ್ಯ ವಿದ್ಯಮಾನ ಎನಿಸಿದೆ.

ಈ ಹಿಂದೆ ಮದ್ರಸಾ ಉಪಾಧ್ಯಾಯರೊಬ್ಬರು ‘ಹಿಂದೂ ಧರ್ಮಕ್ಕಿಂತ ಇಸ್ಲಾಂ ಶ್ರೇಷ್ಠವಾದುದು’ ಎಂದು ಬೋಧಿಸುತ್ತಿದ್ದಾರೆ ಎನ್ನುವ ತಿರುಚಿದ ಚಿತ್ರವೊಂದು ಶೇರ್ ಆಗಿತ್ತಿತ್ತು. ಮಂದಸೌರ್ ಅತ್ಯಾಚಾರ ಆರೋಪಿಗಳ ಬಿಡುಗಡೆಗೆ ಮುಸ್ಲಿಮರು ಒತ್ತಾಯಿಸುತ್ತಿದ್ದಾರೆ. ಯಾವುದೇ ಚಿತ್ರ ಅಥವಾ ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುವ ಮೊದಲು ಅವುಗಳ ಸಾಚಾತನ ಪರಿಶೀಲಿಸಿಕೊಳ್ಳುವುದು ಒಳಿತು.

ಬರಹ ಇಷ್ಟವಾಯಿತೆ?

 • 13

  Happy
 • 6

  Amused
 • 0

  Sad
 • 2

  Frustrated
 • 4

  Angry

Comments:

0 comments

Write the first review for this !