ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ಯೋಜನೆಯೇ ನಿಜವಾದ ದೇಶಭಕ್ತಿ: ನರೇಂದ್ರ ಮೋದಿ 

Last Updated 15 ಆಗಸ್ಟ್ 2019, 7:34 IST
ಅಕ್ಷರ ಗಾತ್ರ

ನವದೆಹಲಿ: 73ನೇ ಸ್ವಾತಂತ್ರ್ಯೋತ್ಸವ ಆಚರಣೆ ವೇಳೆ ಕೆಂಪು ಕೋಟೆಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಜನಸಂಖ್ಯಾ ಸ್ಫೋಟ ಬಗ್ಗೆ ಕಳವಳ ವ್ಯಕ್ತ ಪಡಿಸಿದ್ದಾರೆ.

ನಾನಿಂದು ಜನಂಸಂಖ್ಯಾ ಸ್ಫೋಟದ ಬಗ್ಗೆ ನಿಮ್ಮ ಗಮನ ಸೆಳೆಯಲು ಇಚ್ಛಿಸುತ್ತೇನೆ.ನಮ್ಮ ಮಕ್ಕಳ ಆಕಾಂಕ್ಷೆ ಬಗ್ಗೆ ನಾವು ಚಿಂತಿಸಬೇಕಾಗಿದೆ.ಜನಸಂಖ್ಯಾ ಸ್ಫೋಟ ಬಗ್ಗೆ ದೊಡ್ಡ ಮಟ್ಟದ ಚರ್ಚೆಮತ್ತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಜನಸಂಖ್ಯಾ ಸ್ಫೋಟವು ಮುಂದಿನ ಜನಾಂಗಕ್ಕೆ ಹಲವಾರು ಸಮಸ್ಯೆಯನ್ನು ತಂದೊಡ್ಡುತ್ತದೆ. ನಾವುಜನಸಂಖ್ಯಾ ಸ್ಫೋಟ ಬಗ್ಗೆ ಕಾಳಜಿ ವಹಿಸಬೇಕು. ಇದನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆ ರೂಪಿಸಬೇಕು ಎಂದು ಮೋದಿ ಹೇಳಿದ್ದಾರೆ.

ಇದೇ ಮೊದಲ ಬಾರಿ ಮೋದಿ ಜನಸಂಖ್ಯಾ ನಿಯಂತ್ರಣ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚುತ್ತಿರುವ ಜನಸಂಖ್ಯೆ ಬಗ್ಗೆ ಗಮನ ಹರಿಸಬೇಕಿದೆ. ಮಗುವೊಂದನ್ನು ಭೂಮಿಗೆ ತರುವ ಮುನ್ನ, ನಮ್ಮಿಂದ ಆ ಮಗುವಿಗೆ ನ್ಯಾಯ ಒದಗಿಸಲು ಸಾಧ್ಯವೇ? ಅವನು/ ಅವಳು ಬಯಸುವುದನ್ನೆಲ್ಲ ಕೊಡಿಸಲು ನಮ್ಮಿಂದ ಸಾಧ್ಯವೆ? ಎಂಬುದನ್ನು ಕೆಲವರು ಚಿಂತಿಸುತ್ತಾರೆ.ಅವರಿಗೆ ಗೌರವಗಳು ಸಲ್ಲುತ್ತದೆ.ಅವರು ಮಾಡುತ್ತಿರುವುದು ದೇಶಪ್ರೇಮದ ಕೆಲಸ.ಅವರಿಂದ ನಾವು ಕಲಿಯೋಣ.

ಆರೋಗ್ಯಕರ ಮತ್ತು ಸಂಪನ್ಮೂಲ ವ್ಯಕ್ತಿ ಆಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬುದನ್ನು21ನೇ ಶತಮಾನದಲ್ಲಿ ದೇಶದ ಒಬ್ಬ ಪ್ರಜೆಯಾಗಿ ನಾವು ಅರಿತುಕೊಳ್ಳಬೇಕಿದೆ.ಇದು ಬರೀ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ.ಅದಕ್ಕಾಗಿ ಎಲ್ಲರ ಸಹಕಾರ ಬೇಕುಎಂದು ಮೋದಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT