ಶುಕ್ರವಾರ, ಫೆಬ್ರವರಿ 21, 2020
27 °C

ಸಾಹಿತಿಯನ್ನು ಪೊಲೀಸರಿಗೊಪ್ಪಿಸಿದ ಉಬರ್‌ ಕ್ಯಾಬ್‌ ಚಾಲಕನಿಗೆ ಸನ್ಮಾನ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಉಬರ್‌ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಪೌರತ್ವ (ಕಾಯ್ದೆ) ತಿದ್ದುಪಡಿ (ಸಿಎಎ) ವಿರುದ್ಧದ ಪ್ರತಿಭಟನೆಗಳ ಕುರಿತು ಮಾತನಾಡಿದ ಸಾಹಿತಿ ಬಪ್ಪಾದಿತ್ಯ ಸರ್ಕಾರ್‌ ಅವರನ್ನು ಪೊಲೀಸರಿಗೊಪ್ಪಿಸಿದ ಚಾಲಕನಿಗೆ ಬಿಜೆಪಿ ಮುಂಬೈ ಘಟಕದ ಅಧ್ಯಕ್ಷ ಮಂಗಲ್‌ ಪ್ರಭಾತ್‌ ಲೋಧಾ ಅವರು ಶನಿವಾರ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಕ್ಯಾಬ್‌ ಚಾಲಕ ರೋಹಿತ್‌ ಗೌರ್‌ ಅವರಿಗೆ ಸಾಂತಾಕ್ರೂಜ್‌ ಪೊಲೀಸ್‌ ಠಾಣೆಯಲ್ಲಿ ಅವರು ‘ಜಾಗೃತ ನಾಗರಿಕ ಪ್ರಶಸ್ತಿ’ ಪ್ರದಾನ ಮಾಡಿದರು.

‘ಬಪ್ಪಾದಿತ್ಯ ಅವರು ಸಿಎಎ ವಿರುದ್ಧ ದೇಶ ವಿರೋಧಿ ಪಿತೂರಿ ನಡೆಸಿದ್ದಾರೆ’ ಎಂದು ಮಂಗಲ್‌ ಪ್ರಭಾತ್‌ ಆರೋಪಿಸಿದ್ದಾರೆ. ರೋಹಿತ್‌ ಅವರಿಗೆ ಸನ್ಮಾನ ಮಾಡುವ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು