ಛತ್ತೀಸಗಡ: ನಕ್ಸಲರಿಂದ ಸ್ಫೋಟ, ನಾಲ್ವರು ಬಿಎಸ್‌ಎಫ್‌ ಯೋಧರಿಗೆ ಗಾಯ

7

ಛತ್ತೀಸಗಡ: ನಕ್ಸಲರಿಂದ ಸ್ಫೋಟ, ನಾಲ್ವರು ಬಿಎಸ್‌ಎಫ್‌ ಯೋಧರಿಗೆ ಗಾಯ

Published:
Updated:

ರಾಯಪುರ: ಇಲ್ಲಿನ ಬಿಜಾಪುರ ಜಿಲ್ಲೆಯಲ್ಲಿ ಮಾವೋವಾದಿಗಳು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ) ಸ್ಫೋಟಗೊಂಡು ನಾಲ್ವರು ಬಿಎಸ್‌ಎಫ್‌ ಯೋಧರು ಸೇರಿದಂತೆ ಆರು ಮಂದಿ ಗಾಯಗೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ ಎಂದು ಹಿರಿಯ ಉಪ ಪೊಲೀಸ್‌ ಅಧಿಕಾರಿ ಸುಂದರ್‌ ರಾಜ್‌ ತಿಳಿಸಿದ್ದಾರೆ.

ಜಿಲ್ಲಾ ಮೀಸಲು ಭದ್ರತಾ ಪಡೆಯ ಒಬ್ಬ, ಬಿಎಸ್‌ಎಫ್‌ನ 414ನೇ ಬೆಟಾಲಿಯನ್‌ಗೆ ಸೇರಿದ ನಾಲ್ವರು ಸಿಬ್ಬಂದಿ ಹಾಗೂ  ನಾಗರಿಕರೊಬ್ಬರು ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.

ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದೆ.

ಬಿಜಾಪುರ ರಾಜ್ಯಧಾನಿ ರಾಯಪುರದಿಂದ 450 ಕಿ.ಮೀ ದೂರದಲ್ಲಿದೆ. *

*

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !