ಆದ್ಯತೆಯ ಕಂಪನಿ: ‘ಫ್ಲಿಪ್‌ಕಾರ್ಟ್’ ನಂ.1

ಶುಕ್ರವಾರ, ಏಪ್ರಿಲ್ 19, 2019
27 °C
ಲಿಂಕ್ಡ್‌ಇನ್‌ ಸಮೀಕ್ಷೆ : ಟಾಪ್ 10ರ ಪಟ್ಟಿಯಲ್ಲಿವೆ ಅಂತರ್ಜಾಲ ಕಂಪನಿಗಳು

ಆದ್ಯತೆಯ ಕಂಪನಿ: ‘ಫ್ಲಿಪ್‌ಕಾರ್ಟ್’ ನಂ.1

Published:
Updated:
Prajavani

ನವದೆಹಲಿ: ಭಾರತದಲ್ಲಿ ‘ಉದ್ಯೋಗಕ್ಕೆ ಆದ್ಯತೆಯಲ್ಲಿರುವ ಕಂಪನಿಗಳು’ ಪಟ್ಟಿಯಲ್ಲಿ ವಾಲ್‌ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಮೊದಲ ಸ್ಥಾನದಲ್ಲಿದೆ. ಅಮೆಜಾನ್ ಮತ್ತು ಓಯೊ ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ. 

ಸಾಮಾಜಿಕ ಜಾಲತಾಣ ಲಿಂಕ್ಡ್ಇನ್ ನಡೆಸಿರುವ ‘2019 ಟಾಪ್ ಕಂಪನಿಗಳು’ ಸಮೀಕ್ಷೆಯಿಂದ ಈ ವಿಷಯ ತಿಳಿದುಬಂದಿದೆ. 

ಪಟ್ಟಿಯಲ್ಲಿರುವ ಬಹುತೇಕ ಕಂಪನಿಗಳು ಎಂಜಿನಿಯರಿಂಗ್, ಕಾರ್ಯ
ನಿರ್ವಹಣೆ ಹಾಗೂ ಔದ್ಯಮಿಕ ಅಭಿವೃದ್ಧಿ ವಿಭಾಗಗಳಿಗೆ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿವೆ.  ಪಟ್ಟಿಯಲ್ಲಿರುವ ಇತರೆ ಕಂಪನಿಗಳಲ್ಲಿ ಐಬಿಎಂ (15), ಓಲಾ (19), ಐಸಿಐಸಿಐ ಬ್ಯಾಂಕ್ (20), ಲಾರ್ಸೆನ್ ಆ್ಯಂಡ್ ಟರ್ಬೊ (23), ಒರಾಕ್ಯಲ್ (24) ಸೇರಿವೆ ಎಂದು ವರದಿ ತಿಳಿಸಿದೆ.

ಆಯ್ಕೆಯ ಮಾನದಂಡ

ಕಂಪನಿ ಕುರಿತ ಆಸಕ್ತಿ, ಉದ್ಯೋಗಿಗಳ ಜತೆ ಕಂಪನಿ ನಡೆದುಕೊಳ್ಳುವ ರೀತಿ, ಉದ್ಯೋಗ ಬೇಡಿಕೆ ಮತ್ತು ಉದ್ಯೋಗಿಗಳನ್ನು ತಮ್ಮ ಸಂಸ್ಥೆಯಲ್ಲಿಯೇ ಉಳಿಸಿಕೊಳ್ಳುವ ಕಂಪನಿಯ ಸಾಮರ್ಥ್ಯ ಈ ನಾಲ್ಕು ಅಂಶಗಳನ್ನು ಮಾನದಂಡವಾಗಿ ಇರಿಸಿ ರ್‍ಯಾಂಕಿಂಗ್ ಸಿದ್ಧಪಡಿಸಲಾಗಿದೆ.

**

ಈ ವರ್ಷದ ಪಟ್ಟಿಯಲ್ಲಿರುವ ಕಂಪನಿಗಳಲ್ಲಿ ಟಿಸಿಎಸ್‌, ಐಬಿಎಂ ಸೇರಿದಂತೆ ಅರ್ಧದಷ್ಟು ಕಂಪನಿಗಳು ಹೊಸದಾಗಿ ಸೇರ್ಪಡೆಯಾಗಿವೆ. ಉದ್ಯೋಗ ಆಯ್ಕೆ ಮತ್ತು ನೇಮಕಾತಿ ಪ್ರಕ್ರಿಯೆ ಬದಲಾಗುತ್ತಿರುವುದಕ್ಕೆ ಇದು ಸಾಕ್ಷಿ
–ಅದಿತ್ ಚಾರ್ಲಿ, ಲಿಂಕ್ಡ್‌ಇನ್ ಭಾರತೀಯ ಮಾರುಕಟ್ಟೆ ನಿರ್ವಹಣಾ ಸಂಪಾದಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !