ಛತ್ತೀಸಗಡ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಆಸ್ಪತ್ರೆಗೆ ದಾಖಲು

ರಾಯ್‌ಪುರ: ತೀವ್ರವಾಗಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ (74)ಅವರನ್ನು ಶನಿವಾರ ರಾಯ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಅವರ ಪುತ್ರ ಅಮಿತ್ ಜೋಗಿ ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ಉಪಾಹಾರ ಸೇವಿಸುತ್ತಿದ್ದಾಗ ಅವರ ಆರೋಗ್ಯ ಇದ್ದಕ್ಕಿಂದ್ದಂತೆ ಹದಗೆಟ್ಟಿದೆ. ಬಳಿಕ ಆಸ್ಪತ್ರೆಗೆ ದಾಖಲಿಸಿದೆವು ಎಂದು ಅಮಿತ್ ತಿಳಿಸಿದ್ದಾರೆ. ಸದ್ಯ ಅಜಿತ್ ಜೋಗಿ ಪತ್ನಿ, ಶಾಸಕಿ ರೇಣು ಜೋಗಿ ಅವರು ಆಸ್ಪತ್ರೆಯಲ್ಲಿ ಪತಿ ಜತೆಗಿದ್ದಾರೆ.
ಮೊದಲು ಅಧಿಕಾರಿಯಾಗಿದ್ದ ಜೋಗಿ ಅವರು ಬಳಿಕ ರಾಜಕಾರಣದತ್ತ ಮುಖ ಮಾಡಿದವರು. 2000ನೇ ಇಸವಿಯಲ್ಲಿ ಮಧ್ಯಪ‍್ರದೇಶವನ್ನು ವಿಭಜಿಸಿ ಛತ್ತೀಸಗಡ ರಚನೆಯಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆಗ ಕಾಂಗ್ರೆಸ್‌ನಲ್ಲಿದ್ದ ಅಜಿತ್ ಜೋಗಿ ಮುಖ್ಯಮಂತ್ರಿಯಾದರು. ಛತ್ತೀಸಗಡದ ಮೊದಲ ಮುಖ್ಯಮಂತ್ರಿಯಾಗಿ ಅವರು 2000ನೇ ಇಸವಿಯ ನವೆಂಬರ್‌ನಿಂದ 2003ರ ನವೆಂಬರ್ ವರೆಗೆ ಕಾರ್ಯನಿರ್ವಹಿಸಿದ್ದಾರೆ. 2016ರಲ್ಲಿ ಕಾಂಗ್ರೆಸ್ ತ್ಯಜಿಸಿ ‘ಜನತಾ ಕಾಂಗ್ರೆಸ್ ಛತ್ತೀಸಗಡ(ಜೆ)’ ಪಕ್ಷ ಸ್ಥಾಪಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.