ಖಿನ್ನತೆ: ತೆಲುಗು ನಟಿ ಆತ್ಮಹತ್ಯೆ

7

ಖಿನ್ನತೆ: ತೆಲುಗು ನಟಿ ಆತ್ಮಹತ್ಯೆ

Published:
Updated:
Prajavani

ಹೈದರಾಬಾದ್‌: ಖಿನ್ನತೆಗೊಳಗಾಗಿದ್ದ ಧಾರಾವಾಹಿ ನಟಿಯೊಬ್ಬರು ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ತೆಲುಗು ಧಾರಾವಾಹಿಯೊಂದರಲ್ಲಿ ನಾಯಕಿ ಪಾತ್ರ ಮಾಡುತ್ತಿದ್ದ ನಾಗಾ ಝಾನ್ಸಿ (21) ನಾಗಾರ್ಜುನಪುರದ ಅಪಾರ್ಟ್‌ಮೆಂಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸೂರ್ಯ ಎಂಬುವರನ್ನು ಪ್ರೀತಿಸುತ್ತಿದ್ದ ನಾಗಾ, ಅವರು ದೂರವಾದ ಮೇಲೆ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ಕಾರಣದಿಂದಲೇ ಸಾವಿಗೆ ಶರಣಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !