ಶನಿವಾರ, ಅಕ್ಟೋಬರ್ 19, 2019
28 °C

ನೈಸರ್ಗಿಕ ಅನಿಲ ದರದಲ್ಲಿ ‌₹7.55 ಇಳಿಕೆ

Published:
Updated:
ಸಿಎನ್‌ಜಿ ದರ ಇಳಿಕೆ

ಬೆಂಗಳೂರು: ಗ್ಯಾಸ್‌ ಅಥಾರಿಟಿ ಆಫ್‌ ಇಂಡಿಯಾ (ಗೇಲ್‌) ನಗರದಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರವನ್ನು ಪ್ರತಿ ಕೆ.ಜಿ.ಗೆ ₹7.55 ಇಳಿಕೆ ಮಾಡಿದ್ದು, ನೂತನ ದರ ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಯಾಗಲಿದೆ. 

ಹಬ್ಬಗಳ ಋತುವಿನ ಹಿನ್ನೆಲೆಯಲ್ಲಿ ಗೇಲ್‌ ದರ ಪರಿಷ್ಕರಣೆ ಮಾಡಿದೆ. ಇದರಿಂದಾಗಿ ಪ್ರತಿ ಕೆ.ಜಿಗೆ ₹ 58.55 ಇದ್ದ ಸಿಎನ್‌ಜಿ ದರ ₹ 51ಕ್ಕೆ ಇಳಿಕೆಯಾಗಿದೆ. ನಗರದಲ್ಲಿ ಗೇಲ್‌ 15 ಸಿಎನ್‌ಜಿ ಕಾರ್ಯಾಚರಣೆ ಕೇಂದ್ರಗಳನ್ನು ಹೊಂದಿದೆ.

‘ಪ್ರಸಕ್ತ ಆರ್ಥಿಕ ವರ್ಷದಲ್ಲಿ 100 ಸಿಎನ್‌ಜಿ ಕಾರ್ಯಾಚರಣೆ ಕೇಂದ್ರಗಳನ್ನು ನಿರ್ಮಿಸುವ ಗುರಿ ಹಾಕಿಕೊಳ್ಳಲಾಗಿದೆ. ವಾಹನಗಳಿಂದಾಗುವ ಮಾಲಿನ್ಯ ನಿಯಂತ್ರಣಕ್ಕೆ ಸಿಎನ್‌ಜಿ ಸಹಾಯಕವಾಗಿದೆ’ ಎಂದು ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.

 

Post Comments (+)