ಗೂಗಲ್‌ಗೆ ಸ್ಫೂರ್ತಿಯಾದ ಚಿತ್ರಕಲೆ!

7

ಗೂಗಲ್‌ಗೆ ಸ್ಫೂರ್ತಿಯಾದ ಚಿತ್ರಕಲೆ!

Published:
Updated:

ನವದೆಹಲಿ: 72ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸರ್ಚ್ ಎಂಜಿನ್‌ ಗೂಗಲ್‌ ‘ಲಾರಿ ಮೇಲಿನ ಚಿತ್ರಕಲೆ’ಯಿಂದ ಪ್ರೇರಣೆಗೊಂಡು, ವರ್ಣಮಯ ಡೂಡಲ್ ಪ್ರಕಟಿಸಿ ಗೌರವ ಸಮರ್ಪಿಸಿದೆ.

‘40 ಲಕ್ಷ ಚದರ ಕಿಲೊ ಮೀಟರ್‌ ವ್ಯಾಪ್ತಿಯ ಈ ದೇಶದಾದ್ಯಂತ ಸುತ್ತಾಡುವ ಲಾರಿ ಚಾಲಕರು ತಿಂಗಳುಗಟ್ಟಲೆ ಕುಟುಂಬದಿಂದ ದೂರ ಉಳಿದು ರಸ್ತೆಯಲ್ಲೇ ಕಾಲ ಕಳೆಯುತ್ತಾರೆ. ಇಂತಹ ಸಂದರ್ಭದಲ್ಲಿ, ಮನಸ್ಸಿನ ಉಲ್ಲಾಸಕ್ಕಾಗಿ ಅವರು ತಮ್ಮ ಲಾರಿಗಳನ್ನು ಆಕರ್ಷಕ ಜನಪದ ಕಲೆಗಳಿಂದ ಚಿತ್ರಿಸಿಕೊಳ್ಳುತ್ತಾರೆ. ಇದು ಬಹು ಹಿಂದಿನಿಂದಲೂ ನಡೆದುಬಂದಿರುವ ಸಂಪ್ರದಾಯ’ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಕತ್ತರಿಯಾಕಾರದಲ್ಲಿ ಕೊಕ್ಕುಗಳನ್ನು ಪರಸ್ಪರ ಜೋಡಿಸಿಕೊಂಡ ರಾಷ್ಟ್ರಪಕ್ಷಿ ನವಿಲಿನ ಜೋಡಿ ಡೂಡಲ್‌ನ ಮಧ್ಯಭಾಗದಲ್ಲಿದ್ದು, ಅವುಗಳ ಒಂದು ಮಗ್ಗುಲಿನಲ್ಲಿ ಆನೆ, ಮತ್ತೊಂದೆಡೆ ಬಂಗಾಳ ಹುಲಿಯ ಚಿತ್ರ ಬಿಡಿಸಲಾಗಿದೆ. ಹಿಂಬದಿಯಲ್ಲಿ ಉದಯಿಸುತ್ತಿರುವ ಸೂರ್ಯ, ಅದರ ಮುಂದಿನ ನೀರಿನಲ್ಲಿ ಅರಳಿರುವ ನೈದಿಲೆ, ಸುತ್ತ ಇತರ ಹೂವುಗಳನ್ನು ಚಿತ್ರಿಸಲಾಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !