ಗೂಗಲ್‌ನಿಂದ ‘ಬೋಲೊ’ ಆ್ಯಪ್‌ ಬಿಡುಗಡೆ

ಬುಧವಾರ, ಮಾರ್ಚ್ 20, 2019
26 °C

ಗೂಗಲ್‌ನಿಂದ ‘ಬೋಲೊ’ ಆ್ಯಪ್‌ ಬಿಡುಗಡೆ

Published:
Updated:
Prajavani

ನವದೆಹಲಿ: ಪ್ರಾಥಮಿಕ ಶಾಲಾ ಮಕ್ಕಳು ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯನ್ನು ಸುಲಭವಾಗಿ ಓದಲು ಅನುಕೂಲವಾಗಲು ಗೂಗ
ಲ್‌ ಸಂಸ್ಥೆ ‘ಬೋಲೊ’ ಎಂಬ ಆ್ಯಪ್‌ ಅನ್ನು ಬುಧವಾರ ಬಿಡುಗಡೆ ಮಾಡಿದೆ.

ಮೊದಲ ಬಾರಿಗೆ ಭಾರತದಲ್ಲಿ ಬಿಡುಗಡೆ ಮಾಡಲಾಗಿರುವ ಈ ಆ್ಯಪ್‌ ಉಚಿತವಾಗಿದೆ. ಧ್ವನಿ ಗುರುತಿಸುವುದು (ಸ್ಪೀಚ್‌ ರಿಕ ಗ್ನಿಷನ್‌) ಹಾಗೂ ಟೆಕ್ಸ್ಟ್‌ ತೊ ಸ್ಪೀಚ್‌ ತಂತ್ರಜ್ಞಾನ ಆಧರಿಸಿ ಈ ಆ್ಯಪ್‌ ಕಾರ್ಯ ನಿರ್ವಹಿಸಲಿದೆ ಎಂದು ಗೂಗಲ್‌ ಹೇಳಿದೆ.

ಆ್ಯಂಡ್ರಾಯ್ಡ್‌ (ಕಿಟ್‌ಕ್ಯಾಟ್‌ ಹಾಗೂ ಮೇಲ್ಪಟ್ಟ) ಕಾರ್ಯಾಚರಣೆ ವ್ಯವಸ್ಥೆ ಇರುವ ಸ್ಮಾರ್ಟ್‌ಫೋನ್‌ನಲ್ಲಿ ಈ ಆ್ಯಪ್‌ ಕಾರ್ಯ ನಿರ್ವಹಿಸುತ್ತದೆ.

‘ಈ ಆ್ಯಪ್‌ನಲ್ಲಿ ‘ದಿಯಾ’ ಎಂಬ ಕಾಲ್ಪನಿಕ ಪಾತ್ರವೊಂದು ಮಕ್ಕಳು ಕಥೆಗಳನ್ನು ಗಟ್ಟಿಯಾಗಿ ಓದುವಂತೆ ಪ್ರೇರೇಪಿಸುತ್ತದೆ. ಯಾವುದಾದರೂ ಶಬ್ದದ ಉಚ್ಚಾರಣೆ ತಿಳಿಯದ ಸಂದರ್ಭದಲ್ಲಿ ಮಗುವಿನ ನೆರವಿಗೆ ಬರುವ ಈ ಪಾತ್ರ, ಮಗು ಸರಿಯಾಗಿ ಓದಿದಾಗ, ಪ್ರಶಂಸೆಯ ಮಾತುಗಳನ್ನಾಡಿ ಪ್ರೋತ್ಸಾಹಿಸುತ್ತದೆ’ ಎಂದು ಗೂಗಲ್‌ ಇಂಡಿಯಾದ ಪ್ರಾಡಕ್ಟ್‌ ವ್ಯವಸ್ಥಾಪಕ ನಿತಿನ್‌ ಕಶ್ಯಪ್‌ ತಿಳಿಸಿದರು.

‘ಉತ್ತರ ಪ್ರದೇಶದ 200 ಗ್ರಾಮಗಳಲ್ಲಿ ಮಕ್ಕಳಿಗೆ ಈ ಆ್ಯಪ್‌ ಮೂಲಕ ಹಿಂದಿ ಕಲಿಸುವ ಪ್ರಯತ್ನ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರೇ ತಿಂಗಳಲ್ಲಿ ಶೇ 64ರಷ್ಟು ವಿದ್ಯಾರ್ಥಿಗಳಲ್ಲಿ ಓದುವ ಕ್ಷಮತೆ ಸುಧಾರಿಸಿದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !