ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹನ್ ಸಿಂಗ್‌ಗೆ ನೀಡಿದ್ದ ಎಸ್‌ಪಿಜಿ ಭದ್ರತೆ ವಾಪಸ್‌

Last Updated 26 ಆಗಸ್ಟ್ 2019, 17:40 IST
ಅಕ್ಷರ ಗಾತ್ರ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ಎಸ್‌ಪಿಜಿ (ವಿಶೇಷ ಭದ್ರತಾ ಗುಂಪು)ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್ ಪ‍ಡೆದಿದೆ. ಆದರೆ ಝಡ್‌ ಪ್ಲಸ್‌ ಭದ್ರತೆ ಮುಂದುವರಿಯಲಿದೆ.

‘ವಿವಿಧ ಭದ್ರತಾ ಸಂಸ್ಥೆಗಳು ಮೂರು ತಿಂಗಳು ಪರಿಶೀಲನೆ ನಡೆಸಿಬಳಿಕ ನೀಡಿದ ಮಾಹಿತಿ ಆಧರಿಸಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಝಡ್‌ ಪ್ಲಸ್‌ ಭದ್ರತೆಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನಿರ್ವಹಿಸುತ್ತದೆ. ಈ ವಿಷಯವನ್ನು ಮನಮೋಹನ್‌ ಸಿಂಗ್ ಅವರಿಗೆ ತಿಳಿಸಲಾಗಿದೆ’ ಎಂದು ಗೃಹಸಚಿವಾಲಯದ ವಕ್ತಾರ ಸೋಮವಾರ ತಿಳಿಸಿದ್ದಾರೆ.

ಎಸ್‌ಪಿಜಿ ಕಾಯ್ದೆ 1988ರ ಅನುಸಾರ ಮನಮೋಹನ್‌ ಸಿಂಗ್ ಅವರು 2014ರಲ್ಲಿ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದ ಬಳಿಕವೂ ಒಂದು ವರ್ಷ ಅವಧಿಗೆ ಅವರಿಗೆ ಎಸ್‌ಪಿಜಿ ಭದ್ರತೆ ಮುಂದುವರಿಸಲಾಗಿತ್ತು. ಆದರೆ ಅವರಿಗೆ ಹಾಗೂ ಅವರ ಪತ್ನಿಗೆ ಬೆದರಿಕೆ ಇದೆ ಎಂದು ಮಾಹಿತಿ ದೊರಕಿದ ಬಳಿಕ ಪ್ರತಿ ವರ್ಷ ಅವರ ಭದ್ರತೆಯನ್ನು ಮುಂದುವರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT