ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಸ್ಯಾಟ್‌–11 ಉಪಗ್ರಹ ಯಶಸ್ವಿ ಉಡಾವಣೆ

Last Updated 5 ಡಿಸೆಂಬರ್ 2018, 6:56 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದಲ್ಲಿ ಉಪಗ್ರಹ ಆಧರಿತ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ನನಸಾಗಿಸುವ ಜಿಸ್ಯಾಟ್–11 ಉಪಗ್ರಹವನ್ನು ಬುಧವಾರ ಬೆಳಗಿನ ಜಾವ 2.07ಕ್ಕೆ (ಭಾರತೀಯ ಕಾಲಮಾನ) ಫ್ರೆಂಚ್ ಗಯಾನಾದಿಂದ ಉಡಾವಣೆ ಮಾಡಲಾಗಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಈವರೆಗೆ ನಿರ್ಮಿಸಿರುವ ಉಪಗ್ರಹಗಳಲ್ಲಿ ಜಿಸ್ಯಾಟ್–11 ಅತ್ಯಂತ ದೈತ್ಯ ಮತ್ತು ಹೆಚ್ಚು ತೂಕದ ಉಪಗ್ರಹ ಆಗಿದೆ.

ಇದರ ತೂಕ 5,854 ಕೆ.ಜಿ. ಇಷ್ಟು ತೂಕದ ಉಪಗ್ರಹವನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ರಾಕೆಟ್‌ ಇಸ್ರೊ ಬಳಿ ಇಲ್ಲವಾದ್ದರಿಂದ ಐರೋಪ್ಯ ಬಾಹ್ಯಾಕಾಶ ಸಂಸ್ಥೆಯ ಆ್ಯರಿಯಾನ್–5 ರಾಕೆಟ್‌ ಮೂಲಕ ಉಡಾವಣೆ ಮಾಡಲಾಗಿದೆ.

ಉಪಯೋಗಗಳು

* ಡಿಶ್‌ ಆ್ಯಂಟೆನಾ ಮೂಲಕ ಮನೆಗಳಿಗೆ ಉಪಗ್ರಹ ಬ್ರಾಡ್‌ಬ್ಯಾಂಡ್‌ ಸಂಪರ್ಕ ಪಡೆಯಬಹುದು

* ವಿಮಾನದಲ್ಲಿ ಅಂತರ್ಜಾಲ ಸಂಪರ್ಕ ಪಡೆಯಬಹುದು

* ದೇಶದ ಯಾವುದೇ ಮೂಲೆಯಲ್ಲೂ ವೇಗದ ಬ್ರಾಡ್‌ಬ್ಯಾಂಡ್‌ ಸಂಪರ್ಕ ಲಭ್ಯ

* ಭಾರತ್ ನೆಟ್‌ ಯೋಜನೆ ಅಡಿ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಬ್ರಾಡ್‌ಬ್ಯಾಂಡ್ ಸಂಪರ್ಕ

16 ಜಿಬಿಪಿಎಸ್ ವೇಗ

ಈ ಉಪಗ್ರಹವು ಕೇಂದ್ರೀಕೃತ ಕಿರಣಗಳನ್ನು ಬಳಸುವುದರಿಂದ ದತ್ತಾಂಶ ವಿನಿಮಯದ ವೇಗ ಹೆಚ್ಚು. ಈ ಉಪಗ್ರಹವು ಕಾರ್ಯಾರಂಭ ಮಾಡಿ, ಸಾವರ್ಜನಿಕ ಸೇವೆಗೆ ಲಭ್ಯವಾದರೆ 16 ಜಿಬಿಪಿಎಸ್‌ನಷ್ಟು ವೇಗದ ಅಂತರ್ಜಾಲ ಸೇವೆಯನ್ನು ಆರಂಭಿಸಬಹುದು

ಜಿಸ್ಯಾಟ್‌–11 ಉಪಗ್ರಹವು ಇಡೀ ದೇಶಕ್ಕೆ ಸಂಪರ್ಕ ಏರ್ಪಡಿಸಲು ಹಲವು ಇನ್ಫ್ರಾರೆಡ್‌ ಕಿರಣಗಳನ್ನು ಬಳಸುತ್ತದೆ. ಈ ಕಿರಣಗಳ ವ್ಯಾಪ್ತಿ ತೀರಾ ಕಡಿಮೆ. ಆದರೆ ಸಾಮರ್ಥ್ಯ ಅತ್ಯಧಿಕ. ಹೀಗಾಗಿ ದತ್ತಾಂಶ ರವಾನೆಗೆ ಪ್ರಚಂಡ ವೇಗವಿರುತ್ತದೆ. ಇಂತಹ 32 ಕಿರಣಗಳು ದೇಶದ 16 ಸ್ಥಳಗಳಲ್ಲಿ ಕೇಂದ್ರೀಕೃತವಾಗಿರುತ್ತವೆ. ಹೀಗಾಗಿ ದೇಶದ ಎಲ್ಲಾ ಭಾಗಗಳಲ್ಲೂ ಒಂದೇ ವೇಗದ ಅಂತರ್ಜಾಲ ಸೇವೆ ಲಭ್ಯವಾಗಲಿದೆ

* ಈ ಹಿಂದಿನ ಸಂಪರ್ಕ ಉಪಗ್ರಹಗಳಲ್ಲಿ ವಿಸ್ತೃತ–ಏಕ ಇನ್ಫ್ರಾರೆಡ್‌ ಕಿರಣ ಬಳಸಲಾಗುತ್ತಿತ್ತು. ಇಡೀ ದೇಶಕ್ಕೆ ಒಂದೇ ಕಿರಣದ ಮೂಲಕ ಸಂಪರ್ಕ ಏರ್ಪಡುತ್ತಿದ್ದುದ್ದರಿಂದ, ಕಿರಣದ ಸಾಮರ್ಥ್ಯ ದುರ್ಬಲವಾಗುತ್ತಿತ್ತು. ಹೀಗಾಗಿ ವೇಗ ಕಡಿಮೆ ಇರುತ್ತಿತ್ತು

* ಆ ಕಕ್ಷೆಯಿಂದ ಉಪಗ್ರಹವನ್ನು ಭೂಸ್ಥಿರ ಕಕ್ಷೆಗೆ ವರ್ಗಾಯಿಸಲಾಗುತ್ತದೆ. ಉಪಗ್ರಹದಲ್ಲಿರುವ ಎಂಜಿನ್‌ನ ಶಕ್ತಿಯಿಂದ ಈ ಕ್ರಿಯೆ ನಡೆಸಲಾಗುತ್ತದೆ

* ಒಟ್ಟು ಮೂರು ಹಂತದಲ್ಲಿ ಈ ವರ್ಗಾವಣೆ ನಡೆಯುತ್ತದೆ. ನಂತರ ಅಂತಿಮ ಕಕ್ಷೆಯಲ್ಲಿ ಜಿಸ್ಯಾಟ್–11 ನೆಲೆ ನಿಲ್ಲಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT