ಅಹ್ಮದ್ ಪಟೇಲ್ ಆಯ್ಕೆ: ಆರೋಪ ಪಟ್ಟಿ ಸಲ್ಲಿಕೆ

7

ಅಹ್ಮದ್ ಪಟೇಲ್ ಆಯ್ಕೆ: ಆರೋಪ ಪಟ್ಟಿ ಸಲ್ಲಿಕೆ

Published:
Updated:

ಅಹಮದಾಬಾದ್: ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಅವರು 2017ರಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಬಲವಂತ್ ಸಿಂಗ್ ರಜಪೂತ್ ಸಲ್ಲಿಸಿದ್ದ ಅರ್ಜಿ ಸಂಬಂಧ ಗುಜರಾತ್ ಹೈಕೋರ್ಟ್ ಆರೋಪ ಪಟ್ಟಿ ದಾಖಲಿಸಿಕೊಂಡಿದೆ. 

ನ್ಯಾಯಮೂರ್ತಿ ಬೆಲಾ ತ್ರಿವೇದಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಇದೇ 18ಕ್ಕೆ ನಿಗದಿಪಡಿಸಿದ್ದಾರೆ. 

ಅರ್ಜಿಯಲ್ಲಿನ ಆರು ಅಂಶಗಳನ್ನು ಒಳಗೊಂಡು ಜನಪ್ರತಿನಿಧಿ ಕಾಯ್ದೆ 1951ರ ಅಡಿಯ ವಿವಿಧ ಸೆಕ್ಷನ್‌ಗಳ ಅನುಸಾರ ಆರೋಪಪಟ್ಟಿ ಸಿದ್ಧಪಡಿಸಲಾಗಿದೆ. 

ರಾಜ್ಯಸಭೆಗೆ ಆಯ್ಕೆಯಾದ ಕುರಿತು ವಿಚಾರಣೆ ಎದುರಿಸುವಂತೆ ಸುಪ್ರೀಂ ಕೋರ್ಟ್ ಈಚೆಗೆ ಅಹ್ಮದ್ ಪಟೇಲ್ ಅವರಿಗೆ ಸೂಚಿಸಿತ್ತು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !