ಶುಕ್ರವಾರ, ಸೆಪ್ಟೆಂಬರ್ 25, 2020
28 °C

ಲಂಡನ್ ಮೂಲದ ಪ್ರಶಸ್ತಿ ಪಟ್ಟಿಗೆ ‘ಏಕತಾ ಮೂರ್ತಿ’ ಆಯ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಹಮದಾಬಾದ್: ಸರ್ದಾರ್‌ ವಲ್ಲಭಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ‘ಏಕತಾ ಪ್ರತಿಮೆ’, ಬ್ರಿಟನ್ ಮೂಲದ ಇನ್‌ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್‌ ಸಂಸ್ಥೆಯ ಪ್ರಶಸ್ತಿ ಪಟ್ಟಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.

ಸಂಸ್ಥೆ 2019ನೇ ಸಾಲಿಗೆ ನೀಡುವ ‘ದಿ ಸ್ಟ್ರಕ್ಚರಲ್ ಅವಾರ್ಡ್ಸ್‌’ಗೆ ಆಯ್ಕೆಯಾಗಿರುವ 49 ರಚನೆಗಳ ಪೈಕಿ ‘ಏಕತಾ ಪ್ರತಿಮೆ’ ಸಹ ಸೇರಿದೆ. ನವೆಂಬರ್ 15ಕ್ಕೆ ಲಂಡನ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಘೋಷಣೆಯಾಗಲಿದೆ.

‘ಏಕತಾ ಪ್ರತಿಮೆಯ ಗಾತ್ರ ಹಾಗೂ ಅದು ಇರುವ ಸ್ಥಳ ‍‍ಪ್ರಭಾವಶಾಲಿಯಾಗಿದೆ’ ಎಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟಿದೆ.

ಹಿರಿಯ ಶಿಲ್ಪಿ ರಾಮ ವನಜಿ ಸುತಾರ್ ಅವರು ಈ ಪ್ರತಿಮೆ ವಿನ್ಯಾಸಗೊಳಿಸಿದ್ದು, ಲಾರ್ಸನ್ ಆ್ಯಂಡ್ ಟುಬ್ರೊ (ಎಲ್‌ ಆ್ಯಂಡ್ ಟಿ) ನಿರ್ಮಿಸಿದೆ.

ಇನ್‌ಸ್ಟಿಟ್ಯೂಷನ್ ಆಫ್ ಸ್ಟ್ರಕ್ಚರಲ್ ಎಂಜಿನಿಯರ್ಸ್‌ ಸಂಸ್ಥೆಯು ವಿಶ್ವದ ಅತ್ಯುತ್ತಮ ರಚನೆಗಳಿಗೆ ಕಳೆದ 52 ವರ್ಷಗಳಿಂದ ಈ ಸಂಸ್ಥೆ ಪ್ರಶಸ್ತಿ ನೀಡುತ್ತಿದೆ.

‘ಸ್ಟ್ರಕ್ಚರಲ್ ಎಂಜಿನಿಯರ್‌ಗಳು ನಿರ್ವಹಿಸುವ ಪ್ರಮುಖ ಕಾರ್ಯಗಳ ಕುರಿತು ಜಾಗೃತಿ ಹೆಚ್ಚಿಸುವುದು ಈ ಪ್ರಶಸ್ತಿ ನೀಡುವ ಉದ್ದೇಶಗಳಲ್ಲಿ ಒಂದಾಗಿದೆ’ ಎಂದು ಸಂಸ್ಥೆಯ ಸಿಇಒ ಮಾರ್ಟಿನ್ ಪೊವೆಲ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು