ಶುಕ್ರವಾರ, ಫೆಬ್ರವರಿ 21, 2020
22 °C

ಎಚ್‌ಎಎಲ್‌ ಲಘು ಹೆಲಿಕಾಪ್ಟರ್‌ಗಳ ಆರಂಭಿಕ ಕಾರ್ಯಾಚರಣೆ ಅನುಮತಿ

ಪಿಟಿಐ Updated:

ಅಕ್ಷರ ಗಾತ್ರ : | |

ಲಖನೌ: ಲಘು ಹೆಲಿಕಾಪ್ಟರ್ (LUH) ನಿರ್ಮಾಣಕ್ಕೆ ಆರಂಭಿಕ ಕಾರ್ಯಾಚರಣಾ ಅನುಮತಿ (IOC) ದೊರೆತಿದೆ ಎಂದು ಹಿಂದೂಸ್ತಾನ್ ಎರೊನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ತಿಳಿಸಿದೆ. ಸಶಸ್ತ್ರ ಪಡೆಗಳಲ್ಲಿ ಸೇವೆಯಲ್ಲಿರುವ ಚೀತಾ ಮತ್ತು ಚೇತಕ್ ಹಲಿಕಾಪ್ಟರ್‌ಗಳನ್ನು ಈ ಹೊಸ ಮಾದರಿಯ ಹೆಲಿಕಾಪ್ಟರ್ ಬದಲಿಸಲಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮಕ್ಷಮ ಎಚ್‌ಎಎಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್.ಮಾಧವನ್ ಅವರು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ಸತೀಶ್‌ ರೆಡ್ಡಿ ಅವರಿಂದ ಅನುಮತಿ ಪತ್ರ ಪಡೆದುಕೊಂಡರು ಎಂದು ಎಚ್‌ಎಎಲ್‌ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಒಂದೇ ಎಂಜಿನ್‌ನ ಈ ಹೆಲಿಕಾಪ್ಟರ್‌ಗೆ ಮೂರು ಟನ್ ತೂಕಹೊರುವ ಸಾಮರ್ಥ್ಯವಿದೆ. ಭೂಸೇನೆ ಮತ್ತು ವಾಯುಸೇನೆಯ ಅಗತ್ಯಕ್ಕೆ ತಕ್ಕಂತೆ ದೇಶೀಯವಾಗಿಯೇ ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿರುವುದು ಈ ಹೆಲಿಕಾಪ್ಟರ್‌ನ ವೈಶಿಷ್ಟ್ಯ.

‘ಇದು ಎಚ್‌ಎಎಲ್‌ ಪಾಲಿಗೆ ಸ್ಮರಣೀಯ ಕ್ಷಣ’ ಎಂದು ಪ್ರತಿಕ್ರಿಯಿಸಿದ ಮಾಧವನ್, ‘ಸಶಸ್ತ್ರ ಪಡೆಗಳ ಅಗತ್ಯಕ್ಕೆ ತಕ್ಕಂತೆ ರಕ್ಷಣಾ ಉಪಕರಣಗಳನ್ನು ಅಭಿವೃದ್ಧಿಪಡಿಸುವ ನಮ್ಮ ಉತ್ಸಾಹವನ್ನು ಇದು ಹೆಚ್ಚಿಸಿದೆ. ಸಶಸ್ತ್ರ ಪಡೆಗಳ ಕಾರ್ಯನಿರ್ವಹಣೆ ಸುಧಾರಿಸುವ ಪ್ರಕ್ರಿಯೆಯಲ್ಲಿ ಸ್ವಾವಲಂಬನೆ ಸಾಧಿಸಲು ನೆರವಾಗುತ್ತದೆ. ಕಾಲಮಿತಿಯೊಳಗೆ ತನ್ನ ಗ್ರಾಹಕರ ಅಗತ್ಯ ಪೂರೈಸಲು ಎಚ್‌ಎಎಲ್ ಬದ್ಧವಾಗಿದೆ’ ಎಂದು ಮಾಧವನ್ ನುಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು