ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಕ್ಸೊ ಕಾಯ್ದೆ ತಿದ್ದುಪಡಿಗೆ ಮದ್ರಾಸ್ ಹೈಕೋರ್ಟ್ ಸಲಹೆ

Last Updated 28 ಏಪ್ರಿಲ್ 2019, 3:29 IST
ಅಕ್ಷರ ಗಾತ್ರ

ಚೆನ್ನೈ (ಪಿಟಿಐ): 16ರ ವಯೋಮಾನದ ಬಳಿಕ ಸಮ್ಮತಿಯ ಲೈಂಗಿಕ ಕ್ರಿಯೆ ಯನ್ನುಪೋಕ್ಸೊ ಕಾಯ್ದೆಯಿಂದ ಹೊರ ಗಿಡಲು ಮದ್ರಾಸ್ ಹೈಕೋರ್ಟ್ ಸಲಹೆ ನೀಡಿದೆ.

ಪೋಕ್ಸೊ ಕಾಯ್ದೆ ಅಡಿಯಲ್ಲಿ ನಮಕ್ಕಲ್‌ನ ಮಹಿಳಾ ನ್ಯಾಯಾಲಯ ತಮಗೆ ವಿಧಿಸಿದ್ದ ಶಿಕ್ಷೆ ಪ್ರಶ್ನಿಸಿ ಶಬರಿ ಎನ್ನುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ವಿ.‍ಪಥಿಬನ್ ಈ ಸಲಹೆ ನೀಡಿದ್ದಾರೆ.

17 ವರ್ಷದ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಶಬರಿಗೆ ಮಹಿಳಾ ಕೋರ್ಟ್‌ 10 ವರ್ಷ ಜೈಲು ವಿಧಿಸಿತ್ತು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ, ‘16 ವರ್ಷದ ನಂತರದ ಸಮ್ಮತಿಯ ಲೈಂಗಿಕ ಕ್ರಿಯೆಯನ್ನು ಕಠಿಣವಾದ ಪೋಕ್ಸೊ ಕಾಯ್ದೆಯಿಂದ ಹೊರಗಿಡಬಹುದು. ಪೋಕ್ಸೊ ವ್ಯಾಖ್ಯೆಗೆ ಸೇರುವಂತಹ ಲೈಂಗಿಕ ದೌರ್ಜನ್ಯ ಪ್ರಕರಣಗಳಿದ್ದರೆ, ಕಾಯ್ದೆ ಅಡಿಯಲ್ಲಿ ಹೊಸ ನಿಯಮ ಸೇರ್ಪಡೆಗೊಳಿಸಿ ಅದರ ವ್ಯಾಪ್ತಿಯಲ್ಲಿ ವಿಚಾರಣೆ ನಡೆಸಬಹುದು’ ಎಂದು ಸೂಚಿಸಿದ್ದಾರೆ.

ಈ ಸಲಹೆಯನ್ನು ಸಂಬಂಧಪಟ್ಟ ಇಲಾಖೆ ಎದುರು ಇರಿಸಿ ಇವು ಸ್ವೀಕಾರಾರ್ಹವೆ ಎಂದು ಅಭಿಪ್ರಾಯಪಡೆಯಬೇಕು ಎಂದುರಾಜ್ಯ ಪೋಕ್ಸೊ ಸಮಿತಿ, ಸಾಮಾಜಿಕ ರಕ್ಷಣೆ ಆಯುಕ್ತ, ಸಾಮಾಜಿಕ ಅಭಿವೃದ್ಧಿ ಇಲಾಖೆಗೆ ನ್ಯಾಯಮೂರ್ತಿ ನಿರ್ದೇಶನ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT