ಸೋಮವಾರ, ಆಗಸ್ಟ್ 26, 2019
21 °C

ಹಲವು ರೈಲುಗಳು ರದ್ದು: ಮಹಾರಾಷ್ಟ್ರದಲ್ಲಿ ಮುಂದುವರಿದ ಭಾರಿ ಮಳೆ

Published:
Updated:

ಮುಂಬೈ: ವಾಣಿಜ್ಯ ನಗರಿ ಮುಂಬೈ ಮತ್ತು ಮಹಾರಾಷ್ಟ್ರದ ಕೊಂಕಣ ಕರಾವಳಿ ಪ್ರದೇಶದಲ್ಲಿ ಭಾರಿ ಮಳೆ ಮುಂದುವರಿದಿದೆ. ಲೋಕಲ್‌ ರೈಲುಗಳ ಸಂಚಾರವನ್ನು ಸೀಮಿತಗೊಳಿಸಲಾಗಿದೆ. ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಿಂದ ಮುಂಬೈಗೆ ಸಂಪರ್ಕ ಕಲ್ಪಿಸುವ ಹಲವು ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ, ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಳೆಯಿಂದಾಗಿ ನಗರದಲ್ಲಿ ವ್ಯಾಪಕವಾಗಿ ನೀರು ನಿಂತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ, ಕರ್ನಾಳ ಪಕ್ಷಿತಾಣ, ತುಂಗಾರೇಶ್ವರ ಮತ್ತು ತಾನ್ಸಾ ಅಭಯಾರಣ್ಯಗಳಲ್ಲಿ ತೊರೆಗಳು ಉಕ್ಕಿ ಹರಿಯುತ್ತಿದ್ದು, ಜಲಪಾತಗಳು ಮೈಂದುಂಬಿಕೊಂಡಿವೆ.

ಸಮುದ್ರದಲ್ಲಿ ಅಲೆಗಳ ಹೊಡೆತ ಜೋರಾಗಿದೆ. ನಾಗರಿಕರಿಗೆ ಬೀಚ್‌ಗಳ ಸಮೀಪ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ರೈಲು ಸಂಚಾರದಲ್ಲಿ ವ್ಯತ್ಯಯ

ರದ್ದಾದ ರೈಲುಗಳು

ಮುಂಬೈ–ಸೊಲ್ಲಾಪುರ ಸಿದ್ದೇಶ್ವರ ಎಕ್ಸ್‌ಪ್ರೆಸ್‌

ಮುಂಬೈ–ಚೆನ್ನೈ ಮೇಲ್

ಭಾಗಶಃ ರದ್ದು
ಬಿಜಾಪುರ–ಮುಂಬೈ ಫಾಸ್ಟ್‌ ಪ್ಯಾಸೆಂಜರ್ (ಪುಣೆಯವರೆಗೆ ಮಾತ್ರ)

ಮುಂಬೈ–ಬೆಂಗಳೂರು ಉದ್ಯಾನ್ ಎಕ್ಸ್‌ಪ್ರೆಸ್ (ದೌಂಡ್‌ ನಿಲ್ದಾಣದವರೆಗೆ ಮಾತ್ರ)

ಮುಂಬೈ–ಚೆನ್ನೈ ಎಕ್ಸ್‌ಪ್ರೆಸ್ (ಪುಣೆಯವರೆಗೆ ಮಾತ್ರ)

ಮಾರ್ಗ ಬದಲಾವಣೆ

ಮುಂಬೈ–ಬೀದರ್‌ ಎಕ್ಸ್‌ಪ್ರೆಸ್ (ರೈ.ಸಂ 22143): ಕಲ್ಯಾಣ್, ಲಗತ್‌ಪುರಿ ಮನ್‌ಮಾದ್, ಔರಂಗಾಬಾದ್, ಲಾತೂರ್ ರೋಡ್

ಜೋಧ್‌ಪುರ–ಬೆಂಗಳೂರು ಎಕ್ಸ್‌ಪ್ರೆಸ್‌ (ರೈ.ಸಂ 16507): ಜಲಗಾವ್, ಮನ್‌ಮಾದ್, ದೌಂಡ್, ಕುರುದುವಾಡಿ, ಮೀರಜ್

ಕೊಯಂಬತ್ತೂರು ಎಕ್ಸ್‌ಪ್ರೆಸ್‌ (ರೈ.ಸಂ 11013): ದಿವಾ, ಪನ್‌ವೇಲ್, ರೋಹಾ, ಮಡಗಾವ್, ಹುಬ್ಬಳ್ಳಿ, ಗುಂತಕಲ್

ಮುಂಬೈ–ಚೆನ್ನೈ ಎಕ್ಸ್‌ಪ್ರೆಸ್‌ (ರೈ.ಸಂ 11041): ಕರ್ಜತ್, ಪನ್‌ವೇಲ್, ರೋಹಾ, ಮಡಗಾವ್, ಹುಬ್ಬಳ್ಳಿ, ಗುಂತಕಲ್

ದಾದರ್‌–ಚೆನ್ನೈ (ರೈ.ಸಂ 12163): ಕರ್ಜತ್, ಪನ್‌ವೇಲ್, ರೋಹಾ, ಮಡಗಾವ್, ಹುಬ್ಬಳ್ಳಿ, ಗುಂತಕಲ್

ಮುಂಬೈ–ಕನ್ಯಾಕುಮಾರಿ ಎಕ್ಸ್‌ಪ್ರೆಸ್‌ (ರೈ.ಸಂ 16381): ಕರ್ಜತ್, ಪನ್‌ವೇಲ್, ರೋಹಾ, ಮಡವಾವ್‌, ಶೊರಾಪುರ

Post Comments (+)