ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಪೆ ಶಿಕ್ಷಣ ಸಂಸ್ಥೆಗಳಿಗೆ ‘ಮಾರ್ಗದರ್ಶನ’

Last Updated 28 ಜುಲೈ 2019, 20:02 IST
ಅಕ್ಷರ ಗಾತ್ರ

ನವದೆಹಲಿ: ಕಳಪೆ ಕಾರ್ಯಕ್ಷಮತೆಯ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಗುಣಮಟ್ಟವನ್ನು ಸುಧಾರಿಸಲು ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳಿಂದ ನೆರವು ಒದಗಿಸುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ.

ಪರಾಮರ್ಶ್‌ ಎಂಬುದು ಯೋಜನೆಯ ಹೆಸರು. ಕಳಪೆ ಗುಣಮಟ್ಟದ ಸಂಸ್ಥೆಗಳಲ್ಲಿ ಉತ್ತಮ ಗುಣಮಟ್ಟದ ಸಂಸ್ಥೆಗಳು ವಿವಿಧ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಅನುಷ್ಠಾನ ಮಾಡಲಿವೆ.

ಈ ಕೆಲಸಕ್ಕೆ ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಬಳಸಿಕೊಳ್ಳಲಾಗುವುದು. ಇದಕ್ಕೆ ತಗಲುವ ವೆಚ್ಚವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಭರಿಸಲಿದೆ. ಉತ್ತಮ ಗುಣಮಟ್ಟದ ಸಂಸ್ಥೆಯು ಕನಿಷ್ಠ ಐದು ಸಂಸ್ಥೆಗಳನ್ನು ಆಯ್ಕೆ ಮಾಡಿ ಮಾರ್ಗದರ್ಶನ ನೀಡಬೇಕು.

ಸರ್ಕಾರಿ ಸಂಸ್ಥೆಗಳ ಮಾನ್ಯತೆ ಪಡೆದುಕೊಳ್ಳುವುದಕ್ಕೂ ಮಾರ್ಗದರ್ಶಕ ಸಂಸ್ಥೆಗಳು ಸಹಾಯ ಮಾಡಲಿವೆ.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಸಂಸ್ಥೆ (ನ್ಯಾಕ್‌) ಹಾಗೂ ರಾಷ್ಟ್ರೀಯ ಮಾನ್ಯತಾ ಪರಿಷತ್‌ (ಎನ್‌ಬಿಎ) ಈವರೆಗೆ 903 ವಿಶ್ವವಿದ್ಯಾಲಯಗಳ ಪೈಕಿ ಶೇ 39ರಷ್ಟನ್ನು ಮತ್ತು 40 ಸಾವಿರ ಕಾಲೇಜುಗಳ ಪೈಕಿ ಶೇ 20ರಷ್ಟನ್ನು ಮೌಲ್ಯಮಾಪನಕ್ಕೆ ಒಳಪಡಿಸಿ ಪ್ರಮಾಣಪತ್ರ ನೀಡಿವೆ. 2022ರೊಳಗೆ ಎಲ್ಲ ಸಂಸ್ಥೆಗಳಿಗೆ ಪ್ರಮಾಣಪತ್ರ ನೀಡುವುದು ಮಾನವ ಸಂಪನ್ಮೂಲ ಸಚಿವಾಲಯದ ಗುರಿ.

ನ್ಯಾಕ್‌ ಮತ್ತು ಎನ್‌ಬಿಎಯಲ್ಲಿ ಸಾಕಷ್ಟು ಸಂಪನ್ಮೂಲ ಇಲ್ಲದಿರುವುದು ಮೌಲ್ಯಮಾಪನ ಪ್ರಕ್ರಿಯೆ ವಿಳಂಬವಾಗಲು ಕಾರಣ.

ನೆರವು ನೀಡಿಕೆ ಪ್ರಕ್ರಿಯೆ

*ನ್ಯಾಕ್‌ ಮೌಲ್ಯಮಾಪನದಲ್ಲಿ ಒಟ್ಟು 3.26ಕ್ಕಿಂತ ಹೆಚ್ಚು ಅಂಕ ಪಡೆದ ಸಂಸ್ಥೆಗಳು ಮಾರ್ಗದರ್ಶನ ನೀಡಬಹುದು

*ಇಂತಹ ಸಂಸ್ಥೆಗಳು ಯುಜಿಸಿಯಿಂದ ಅನುದಾನ ಪಡೆಯಲು ಅರ್ಹ

*ಈ ಅನುದಾನದಲ್ಲಿ ಯಾವುದೇ ಮೂಲಸೌಕರ್ಯ ಸೃಷ್ಟಿಸುವಂತಿಲ್ಲ. ಅದನ್ನು ವಿದ್ಯಾರ್ಥಿ–ಶಿಕ್ಷಕರ ಗುಣಮಟ್ಟ ಸುಧಾರಣೆಗೆ ಬಳಸಬೇಕು

*ಮಾರ್ಗದರ್ಶನವು ಒಂದು ವರ್ಷ ಅವಧಿಯದ್ದಾಗಿರುತ್ತದೆ. ಮತ್ತೊಂದು ವರ್ಷ ವಿಸ್ತರಣೆಗೆ ಅವಕಾಶ ಇದೆ

*ಮಾರ್ಗದರ್ಶಕ ಸಂಸ್ಥೆಯು ಹೊರಗಿನಿಂದ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳಬಹುದು

*ಮಾರ್ಗದರ್ಶಕ ಸಂಸ್ಥೆಗಳ ಆಯ್ಕೆಗೆ ‘ಆಯ್ಕೆ ಸಮಿತಿ’ ರಚನೆ ಆಗಲಿದೆ

*ಈ ಸಮಿತಿಯ ಶಿಫಾರಸು ಅನ್ವಯ ಯುಜಿಸಿ ಪ್ರಸ್ತಾವನೆಗಳನ್ನು ಅನುಮೋದಿಸಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT