ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆಗೇಡು ಹತ್ಯೆ: ಏಳು ಮಂದಿಗೆ ಜೀವಾವಧಿ ಶಿಕ್ಷೆ

Last Updated 19 ಫೆಬ್ರುವರಿ 2019, 20:04 IST
ಅಕ್ಷರ ಗಾತ್ರ

ಅಹಮದಾಬಾದ್: 2014ರಲ್ಲಿ ದಂಪತಿಯನ್ನು ‘ಮರ್ಯಾದೆಗೇಡು’ ಹತ್ಯೆ ಮಾಡಿದ ಅಪಾದನೆಯಲ್ಲಿ ಏಳು ಮಂದಿಗೆ ಗುಜರಾತಿನ ದ್ವಾರಕಾ ಜಿಲ್ಲೆಯ ಖಂಬಲಿಯಾ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಮೃತ ಮಹಿಳೆಯ ಪೋಷಕರಾದ ಜೆಸ್‌ಭಾಯಿ ಚೌಹಾಣ್ ಮತ್ತು ಕಾಂತಬೆನ್, ಅವರ ಸಂಬಂಧಿಕರಾದ ಬಾಬುಭಾಯಿ ಚೌಹಾಣ್, ಮನೋಜ್ ಚೌಹಾಣ್, ದೇವಭಾಯಿ ಚೌಹಾಣ್, ವನರಾಜ್ ಚೌಹಾನ್ ಮತ್ತು ಪುಜೀಬೆನ್ ಚೌಹಾಣ್‌ಗೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಎ.ಎಂ. ಶೇಖ್ ಈ ಶಿಕ್ಷೆ ವಿಧಿಸಿದರು.

ಪುರಿಬೆನ್ ಚೌಹಾಣ್‌ ತಮ್ಮ ಕುಟುಂಬದವರ ವಿರೋಧದ ನಡುವೆ 2010ರಲ್ಲಿ ಗೋವಿಂದಭಾಯಿ ಚೌಹಾಣ್ ಎಂಬುವರನ್ನು ಮದುವೆಯಾಗಿದ್ದರು. ನಾಲ್ಕು ವರ್ಷಗಳ ಬಳಿಕ ಪುರಿಬೆನ್‌ ಕುಟುಂಬದವರು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಗೋವಿಂದಭಾಯಿ ಸ್ಥಳದಲ್ಲೇ ಮೃತಪಟ್ಟರೆ, ಪುರಿಬೇನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ದಂಪತಿಗೆ ಒಬ್ಬ ಮಗಳಿದ್ದು, ಘಟನೆ ಸಂದರ್ಭದಲ್ಲಿ ಆಕೆಗೆ ಮೂರು ವರ್ಷ ವಯಸ್ಸಾಗಿತ್ತು.

ಕಲ್ಯಾಣಪುರ ಪೊಲೀಸ್ ಠಾಣೆಯಲ್ಲಿ ಏಳು ಮಂದಿಯ ವಿರುದ್ಧ ‘ಮರ್ಯಾದೆಗೇಡು’ ಹತ್ಯೆ ಮಾಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. 31 ಸಾಕ್ಷಿಗಳು, ದಾಖಲೆಗಳು ಮತ್ತು ಸರ್ಕಾರಿ ಅಭಿಯೋಜಕರ ವಾದಿ ಪರಿಶೀಲಿಸಿದ ನ್ಯಾಯಾಧೀಶರು ಎಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT