ನಾನು ಸಚಿವ, ಇಂಧನ ದರ ಏರಿಕೆಯಿಂದ ನನಗೆ ತೊಂದರೆಯಾಗಿಲ್ಲ: ರಾಮದಾಸ್‌ ಆಠವಲೆ

7

ನಾನು ಸಚಿವ, ಇಂಧನ ದರ ಏರಿಕೆಯಿಂದ ನನಗೆ ತೊಂದರೆಯಾಗಿಲ್ಲ: ರಾಮದಾಸ್‌ ಆಠವಲೆ

Published:
Updated:

ಜೈಪುರ: ‘ನಾನು ಸಚಿವ, ಇಂಧನ ದರ ಏರಿಕೆಯಿಂದ ನನಗೆ ತೊಂದರೆಯಾಗಿಲ್ಲ’ ಎಂದು ಕೇಂದ್ರ ಸಚಿವ ಹಾಗೂ ಆರ್‌ಪಿಐ(ಎ) ಪಕ್ಷದ ಮುಖಂಡ ರಾಮದಾಸ್‌ ಆಠವಲೆ ಹೇಳಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಸಚಿವ ಸ್ಥಾನ ಕಳೆದುಕೊಂಡಿದ್ದರೆ ಬಳಲುತ್ತಿದ್ದೆ, ಆದರೆ ಇಂಧನ ದರ ಏರಿಕೆಯಿಂದ ನನಗೆ ತೊಂದರೆಯಾಗಿಲ್ಲ’ ಎಂದರು.

‘ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಇಂಧನ ದರ ಕಡಿಮೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯವಾಗಿದೆ’ ಎಂದು ತಿಳಿಸಿದ್ದಾರೆ.

ಆಯಾ ರಾಜ್ಯಗಳು ಇಂಧನದ ಮೇಲೆ ವಿಧಿಸುವ ತೆರಿಗೆಯನ್ನು ಕಡಿತಗೊಳಿಸಿದರೆ ಮಾತ್ರ ಬೆಲೆ ಏರಿಕೆಯನ್ನು ತಡೆಗಟ್ಟಬಹುದು. ಜತೆಗೆ, ಈ ವಿಷಯವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದರು.

ರಾಜಸ್ಥಾನದಲ್ಲಿ ನಡೆದಿರುವ ಯೋಜನೆಗಳ ಪ್ರಗತಿಯನ್ನು ಅವರು ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 1

  Sad
 • 0

  Frustrated
 • 11

  Angry

Comments:

0 comments

Write the first review for this !