ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ: ದೇಶದಾದ್ಯಂತ ಕಟ್ಟೆಚ್ಚರ 

7

ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ: ದೇಶದಾದ್ಯಂತ ಕಟ್ಟೆಚ್ಚರ 

Published:
Updated:

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಉಗ್ರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿರುವ ಭಾರತೀಯ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಗಳಾದ ಜೈಷ್ ಎ ಮುಹಮ್ಮದ್ ಮತ್ತು ಲಷ್ಕರ್–ಎ–ತೊಯಬಾ ಸಂಚು ಹೂಡಿವೆ ಎಂದು ಬಲ್ಲಮೂಲಗಳು ವರದಿ ಮಾಡಿವೆ.

ಆಗಸ್ಟ್ 15ರಂದು ಭಾರತೀಯ ಸೇನಾ ಶಿಬಿರಗಳ ಮೇಲೆ ದಾಳಿ ನಡೆಸಲು ಉಗ್ರರು ಗಡಿ ನಿಯಂತ್ರಣಾ ರೇಖೆ ದಾಟಲು ಸಿದ್ಧತೆ ನಡೆಸಿದ್ದಾರೆ ಎಂದು ಕೇಂದ್ರ ಗುಪ್ತದಳ ಮಾಹಿತಿ ನೀಡಿದೆ. ಈ ಉಗ್ರ ಸಂಘಟನೆಯ ಕೆಲವು ಉಗ್ರರು ಈಗಾಗಲೇ ಗಡಿ ನಿಯಂತ್ರಣಾ ರೇಖೆಯ ಚೌರಾ ಬಳಿ ತಲುಪಿದ್ದಾರೆ. ಇಲ್ಲಿಂದ ಇವರು ತಂಗಧರ್ ಸೆಕ್ಟರ್ ನಲ್ಲಿರುವ ಸೇನಾ ಶಿಬಿರದ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ.

ತನಿಖಾ ದಳದ ವರದಿ ಪ್ರಕಾರ ಜೈಷೆ ಸಂಘಟನೆ ಈಗಾಗಲೇ ಬರಮುಲ್ಲಾ ವಲಯದಲ್ಲಿರುವ ಸೂಕ್ಷ್ಮ ಪ್ರದೇಶಗಳ ಮೇಲೆ ದಾಳಿ ನಡೆಸಲು ಉಗ್ರರನ್ನು ಕಳುಹಿಸಿದೆ. ಈ ಉಗ್ರರು ಬರಮುಲ್ಲಾ ಮತ್ತು ಪಟ್ಟಾನ್ ನಗರದ ನಡುವಿನ ಪ್ರದೇಶಗಳ ಮೇಲೆ ದಾಳಿ ನಡೆಸಲು ಸಂಚು ಹೂಡಿರುವ ಸಾಧ್ಯತೆ ಇದೆ. ಬಿಎಸ್‌‍ಎಫ್ ಶಿಬಿರದ ಮೇಲೆ ದಾಳಿ ನಡೆಸಲು ಉಗ್ರರು ಅಲ್ಲಿನ ಸ್ಥಳೀಯರ ಸಹಾಯವನ್ನು ಪಡೆಯಬಹುದು. ಇದೆಲ್ಲದರ ಜತೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿಯೂ ಉಗ್ರ  ಕೃತ್ಯ ನಡೆಯುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ ಎಂದು ವರದಿ ಹೇಳಿದೆ.
 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !