ಬೋಯಿಂಗ್‌–737 ವಿಮಾನ ಹಾರಾಟಕ್ಕೆ ಭಾರತದಲ್ಲಿ ನಿಷೇಧ

ಬುಧವಾರ, ಮಾರ್ಚ್ 20, 2019
26 °C
ಇಥಿಯೋಪಿಯಾ ವಿಮಾನ ದುರಂತ

ಬೋಯಿಂಗ್‌–737 ವಿಮಾನ ಹಾರಾಟಕ್ಕೆ ಭಾರತದಲ್ಲಿ ನಿಷೇಧ

Published:
Updated:
Prajavani

ನವದೆಹಲಿ: ಇಥಿಯೋಪಿಯಾ ವಿಮಾನ ದುರಂತದ ಬೆನ್ನಲ್ಲೇ, ’ಬೋಯಿಂಗ್‌ 737 ಮ್ಯಾಕ್ಸ್‌ 8‘  ವಿಮಾನಗಳ ಹಾರಾಟವನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಸ್ಪೈಸ್‌ಜೆಟ್‌ ಸಂಸ್ಥೆಯಲ್ಲಿ ಈ ಮಾದರಿಯ 12 ವಿಮಾನ ಹಾಗೂ ಜೆಟ್‌ ಏರ್‌ವೇಸ್‌ನಲ್ಲಿ ಇಂತಹ 5 ವಿಮಾನಗಳಿವೆ.  

’ಬೋಯಿಂಗ್‌ 737 ವಿಮಾನಗಳ ಹಾರಾಟವನ್ನು ತಕ್ಷಣದಿಂದ ಸ್ಥಗಿತಗೊಳಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ನಿರ್ಧಾರ ತೆಗೆದುಕೊಂಡಿದೆ. ಈ ವಿಮಾನಗಳಲ್ಲಿ ಸೂಕ್ತ ಬದಲಾವಣೆ ಹಾಗೂ ಸುರಕ್ಷಾ ಕಾರ್ಯಾಚರಣೆ ಖಾತರಿಪಡಿಸಿದ ಬಳಿಕವೇ ಹಾರಾಟಕ್ಕೆ ಅನುವು ಮಾಡಿಕೊಡಲಾಗುತ್ತದೆ‘ ಎಂದು ನಾಗರಿಕ ವಿಮಾನಯಾನ ಇಲಾಖೆ  ಟ್ವಿಟರ್‌ನಲ್ಲಿ ಸ್ಪಷ್ಟಪಡಿಸಿದೆ.

ಮಾರ್ಚ್‌ 11ರಂದು ಇಥಿಯೋಪಿಯಾದ ಆಡಿಸ್‌ ಅಬಾಬದಿಂದ ಕೀನ್ಯಾದ ನೈರೋಬಿಗೆ ಹೊರಟಿದ್ದ ಇಥಿಯೋಪಿಯನ್‌ ಏರ್‌ಲೈನ್ಸ್‌ನ ಬೋಯಿಂಗ್‌ 737 ವಿಮಾನ ಪತನಗೊಂಡು, ಅದರಲ್ಲಿದ್ದ 157 ಮಂದಿ ಮೃತಪಟ್ಟಿದ್ದರು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !