ದೇಶದ ವಿವಿಧ ರಾಜ್ಯಗಳಲ್ಲಿ 1963ರಿಂದ ಈವರೆಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹುದ್ದೇಗೆರಿದ ಮಹಿಳಾ ಮಣಿಗಳ ಪಟ್ಟಿ ಇಲ್ಲಿದೆ.

1963ರಿಂದ ಈವರೆಗೆ ಭಾರತ 18 ಮಹಿಳಾ ಮುಖ್ಯಮಂತ್ರಿಗಳನ್ನು ಮತ್ತು 8 ಉಪಮುಖ್ಯಮಂತ್ರಿಗಳನ್ನು ಕಂಡಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಸುಚೇತಾ ಕೃಪಲಾನಿ ದೇಶದ ಮೊದಲ ಮಹಿಳಾ ಮುಖ್ಯಮಂತ್ರಿಯಾದರೆ, ರಾಜಿಂದರ್ ಕೌರ್ ಭಟ್ಟಲ್ ಅವರು ದೇಶದ ಮೊದಲ ಮಹಿಳಾ ಡಿಸಿಎಂ ಆಗಿದ್ದಾರೆ.

ಸುಚೇತಾ ಕೃಪಲಾನಿ ಅವರು 1963 ಅಕ್ಟೋಬರ್ 2ರಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಶೀಲಾ ದೀಕ್ಷಿತ್ ಅವರು ಅತಿ ಹೆಚ್ಚು ವರ್ಷಗಳ ಕಾಲ (ಹದಿನೈದು ವರ್ಷಗಳಿಗೂ ಹೆಚ್ಚು) ಕಾರ್ಯನಿರ್ವಹಿಸಿದ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅಖಿಲ ಭಾರತ ತೃಣಮೂಲ ಕಾಂಗ್ರೆಸ್ನ ಸಂಸ್ಥಾಪಕಿ ಮಮತಾ ಬ್ಯಾನರ್ಜಿ ಪ್ರಸ್ತುತ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಅತಿ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಎರಡನೇ ಅತಿ ಮಹಿಳಾ ಮುಖ್ಯಮಂತ್ರಿ.

ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂನ ಮಾಜಿ ಪ್ರಧಾನ ಕಾರ್ಯದರ್ಶಿ ದಿ.ಜೆ. ಜಯಲಲಿತಾ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಇವರು ಅತಿ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸಿದ 3ನೇ ಮಹಿಳಾ ಸಿಎಂ. ಅವರು 2016ರಲ್ಲಿ ತಮ್ಮ ಮರಣದವರೆಗೂ ಆ ಹುದ್ದೆಯಲ್ಲಿದ್ದರು. ಅಧಿಕಾರದಲ್ಲಿರುವಾಗಲೇ ನಿಧನರಾದ ಮೊದಲ ಮಹಿಳಾ ಮುಖ್ಯಮಂತ್ರಿ ಅವರು.

ಇನ್ನು ಅದೇ ರಾಜ್ಯ (ತಮಿಳುನಾಡು) ಮತ್ತು ಪಕ್ಷದ ವಿ.ಎನ್. ಜಾನಕಿ ರಾಮಚಂದ್ರನ್ ಅವರು ಅತಿ ಕಡಿಮೆ ಅಧಿಕಾರಾವಧಿ ಹೊಂದಿದ್ದ (23 ದಿನಗಳು) ಮಹಿಳಾ ಸಿಎಂ

ದೆಹಲಿಯ ರೇಖಾ ಗುಪ್ತಾ ಮತ್ತು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಭಾರತದ ಹಾಲಿ ಮಹಿಳಾ ಮುಖ್ಯಮಂತ್ರಿಗಳು.

ಮಹಿಳಾ ಮುಖ್ಯಮಂತ್ರಿಗಳು

ಸುಚೇತಾ ಕೃಪಲಾನಿ- ಉತ್ತರ ಪ್ರದೇಶ

ನಂದಿನಿ ಸತ್ಪತಿ –ಒಡಿಶಾ

ಶಶಿಕಲಾ ಕಾಕೋಡ್ಕರ್ – ಗೋವಾ

ಅನ್ವಾರಾ ತೈಮೂರ್– ಅಸ್ಸಾಂ

ವಿ.ಎನ್ ಜಾನಕಿ ರಾಮಚಂದ್ರನ್– ತಮಿಳುನಾಡು

ಜೆ. ಜಯಲಲಿತಾ –ತಮಿಳುನಾಡು

ಮಾಯಾವತಿ– ಉತ್ತರ ಪ್ರದೇಶ

ರಾಜಿಂದರ್ ಕೌರ್ ಭಟ್ಟಾಲ್ – ಪಂಜಾಬ್

ರಾಬ್ಡಿ ದೇವಿ–ಬಿಹಾರ

ಸುಷ್ಮಾ ಸ್ವರಾಜ್– ದೆಹಲಿ

ಶೀಲಾ ದೀಕ್ಷಿತ್– ದೆಹಲಿ

ಉಮಾ ಭಾರತಿ– ಮಧ್ಯಪ್ರದೇಶ

ವಸುಂಧರಾ ರಾಜೇ –ರಾಜಸ್ಥಾನ

ಮಮತಾ ಬ್ಯಾನರ್ಜಿ – ಪಶ್ಚಿಮ ಬಂಗಾಳ

ಆನಂದಿಬೆನ್ ಪಟೇಲ್– ಗುಜರಾತ್

ಮೆಹಬೂಬಾ ಮುಫ್ತಿ –ಜಮ್ಮು ಮತ್ತು ಕಾಶ್ಮೀರ

ಅತಿಶಿ–ದೆಹಲಿ

ರೇಖಾ ಗುಪ್ತಾ –ದೆಹಲಿ

ಉಪಮುಖ್ಯಮಂತ್ರಿಗಳು

ರಾಜಿಂದರ್ ಕೌರ್ ಭಟ್ಟಲ್ – ಪಂಜಾಬ್ (ಮೊದಲ ಮಹಿಳಾ ಡಿಸಿಎಂ 1996)

ಜಮುನಾ ದೇವಿ –ಮಧ್ಯಪ್ರಧೇಶ (ಅತಿ ಹೆಚ್ಚು ವರ್ಷಗಳ ಕಾಲ ಕಾರ್ಯ ನಿರ್ವಹಿದಸಿದ ಡಿಸಿಎಂ –5 ವರ್ಷ 7 ದಿನ )

ಪಮುಲಾ ಪುಷ್ಪಾ ಶ್ರೀವಾಣಿ –ಆಂಧ್ರಪ್ರದೇಶ

ರೇಣು ದೇವಿ–ಬಿಹಾರ

ಕಮಲಾ ಬೇನಿವಾಲ್ – ರಾಜಸ್ಥಾನ

ದಿಯಾ ಕುಮಾರಿ (ಹಾಲಿ) -ರಾಜಸ್ಥಾನ

ಪ್ರವತಿ ಪರಿದಾ (ಹಾಲಿ) ಒಡಿಶಾ

ಸುನೇತ್ರಾ ಪವಾರ್ (ಹಾಲಿ) ಮಹಾರಾಷ್ಟ್ರ

.ಸುನೇತ್ರಾ ಡಿಸಿಎಂ ಆಗುವುದರ ಬಗ್ಗೆ ನನಗೇನು ಗೊತ್ತಿಲ್ಲ: ಶರದ್ ಪವಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.