ಭಾನುವಾರ, ಆಗಸ್ಟ್ 25, 2019
20 °C

ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಗೊಳಿಸಿದ ಭಾರತ

Published:
Updated:

ನವದೆಹಲಿ: ಪಾಕಿಸ್ತಾನದ ಲಾಹೋರ್‌ಗೆ ತೆರಳಬೇಕಿರುವ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ರದ್ದುಗೊಳಿಸಿರುವುದಾಗಿ ಕೇಂದ್ರ ಸರ್ಕಾರ ಭಾನುವಾರ ತಿಳಿಸಿದೆ.

ಜಮ್ಮು–ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುವ 370ನೇ ವಿಧಿಯನ್ನು ಭಾರತ ಸರ್ಕಾರ ರದ್ದು ಮಾಡಿರುವುದಕ್ಕೆ ಪ್ರತಿಯಾಗಿ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಪಾಕಿಸ್ತಾನ ಗುರುವಾರ ರದ್ದುಗೊಳಿಸಿತ್ತು. ಪ್ರತಿಯಾಗಿ ಭಾರತವೂ ಈಗ ಕ್ರಮ ಕೈಗೊಂಡಿದೆ.‌

ಇದನ್ನೂ ಓದಿ: ಸಂಜೋತಾ ಎಕ್ಸ್‌ಪ್ರೆಸ್ ರೈಲು ಸೇವೆ ರದ್ದುಗೊಳಿಸಿದ ಪಾಕಿಸ್ತಾನ​

‘ಲಾಹೋರ್ ಮತ್ತು ಅಟ್ಟಾರಿ ಮಧ್ಯೆ ಸಂಚರಿಸುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್ 14607/14608 ರೈಲು ಸೇವೆಯನ್ನು ಪಾಕಿಸ್ತಾನ ರದ್ದುಪಡಿಸಿದ್ದು, ಆ ರೈಲಿಗೆ ದೆಹಲಿಯಿಂದ ಅಟ್ಟಾರಿವರೆಗೆ ಸಂಪರ್ಕ ಕಲ್ಪಿಸುತ್ತಿದ್ದ ರೈಲು ಸಂಖ್ಯೆ 14001/14002 ಅನ್ನು ರದ್ದುಗೊಳಿಸಲಾಗಿದೆ’ ಎಂದು ಉತ್ತರ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ದೀಪಕ್ ಕುಮಾರ್ ತಿಳಿಸಿದ್ದಾರೆ.

370ನೇ ವಿಧಿಯ ರದ್ದತಿ ವಿರೋಧಿಸಿ ಭಾರತದ ಜೊತೆ ಎಲ್ಲಾ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಹಾಕಲು ಮತ್ತು ದ್ವಿಪಕ್ಷೀಯ ವ್ಯಾಪಾರವನ್ನು ರದ್ದುಪಡಿಸಲು ಪಾಕಿಸ್ತಾನ ಬುಧವಾರ ತೀರ್ಮಾನಿಸಿತ್ತು. ಬಳಿಕ ಸಂಜೋತಾ ಎಕ್ಸ್‌ಪ್ರೆಸ್, ಪಾಕಿಸ್ತಾನದ ಖೋಕ್ರಾಪರ್‌ನಿಂದ ಭಾರತದ ಮೊನಬಾವೊ ನಡುವೆ ಥಾರ್ ಎಕ್ಸ್‌ಪ್ರೆಸ್ ಅನ್ನು ರದ್ದುಗೊಳಿಸಿದೆ.

ಇದನ್ನೂ ಓದಿ: ಸಂಜೋತಾ ನಂತರ ಥಾರ್ ಎಕ್ಸ್‌ಪ್ರೆಸ್ ರದ್ದು ಮಾಡಲು ಪಾಕ್ ನಿರ್ಧಾರ​

Post Comments (+)