ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಪನಿಗಳ ಆಡಳಿತ ಮಂಡಳಿಯಲ್ಲಿ ಮಹಿಳೆ: ಭಾರತಕ್ಕೆ 12ನೇ ಸ್ಥಾನ

Last Updated 8 ಮಾರ್ಚ್ 2020, 13:26 IST
ಅಕ್ಷರ ಗಾತ್ರ

ಮುಂಬೈ : ಕಂಪನಿಗಳ ಆಡಳಿತ ಮಂಡಳಿಯಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು 12ನೇ ಸ್ಥಾನ ಪಡೆದಿದೆ. ಜಾಗತಿಕವಾಗಿ ಈ ಬೆಳವಣಿಗೆ ಏರುಗತಿಯಲ್ಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಸರ್ಕಾರಿ-ನೌಕರಿ.ಕಾಂ ಮತ್ತು ಮೈಹೈರ್‌ಕ್ಲಬ್‌.ಕಾಂ ನಡೆಸಿದ ‘ವಿಮೆನ್ ಆನ್‌ ಬೋರ್ಡ್‌ 2020’ ಅಧ್ಯಯನ ವರದಿಯಲ್ಲಿ ಈ ಮಾಹಿತಿ ಇದೆ. ಈ ಎರಡೂ ಸೇವಾತಾಣಗಳಲ್ಲಿ ಪಟ್ಟಿ ಮಾಡಲಾಗಿರುವ 7,824 ಕಂಪನಿಗಳ ಮೇಲೆ ಅಧ್ಯಯನ ನಡೆಸಿ, ಈ ವರದಿ ಸಿದ್ಧಪಡಿಸಲಾಗಿದೆ. ಭಾರತದ 628 ಕಂಪನಿಗಳು ಈ ಪಟ್ಟಿಯಲ್ಲಿದ್ದವು.

ಭಾರತದ 628 ಕಂಪನಿಗಳ ಪೈಕಿ ಶೇ 55ರಷ್ಟು ಕಂಪನಿಗಳ ಆಡಿತ ಮಂಡಳಿಗಳು ಮಹಿಳಾ ನಿರ್ದೇಶಕರನ್ನು ಹೊಂದಿವೆ. ಇದರಲ್ಲಿ ಶೇ 29ರಷ್ಟು ಆಡಳಿತ ಮಂಡಳಿಗಳು ಇಬ್ಬರು ಮಹಿಳಾ ನಿರ್ದೇಶಕರನ್ನು ಹೊಂದಿವೆ.

ಭಾರತದ ಕಂಪನಿಗಳ ಆಡಳಿತ ಮಂಡಳಿಯಲ್ಲಿ ಪುರುಷ ನಿರ್ದೇಶಕರ ಅಧಿಕಾರಾವದಿ 3 ವರ್ಷದಷ್ಟಿದೆ. ಆದರೆ, ಮಹಿಳಾ ನಿರ್ದೇಶಕರ ಅಧಿಕಾರವಧಿ 1 ವರ್ಷಕ್ಕಿಂತ ಕಡಿಮೆ. ಈ ಕಂಪನಿಗಳ ಎಲ್ಲಾ ವರ್ಗದ ನೌಕರರಲ್ಲಿ ಮಹಿಳೆಯರ ಪ್ರಮಾಣ ಶೇ 39ರಷ್ಟಿದೆ. ಆದರೆ, ಇದರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಉನ್ನತ ಹುದ್ದೆಗಳಿಗೆ ಹೋಗುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT