ಗುರುವಾರ , ನವೆಂಬರ್ 14, 2019
18 °C

ಪಿಒಕೆ ಮುಂದೆ ನಮ್ಮ ಕೈಸೇರಲಿದೆ: ಜೈಶಂಕರ್‌

Published:
Updated:
Prajavani

ನವದೆಹಲಿ: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವು (ಪಿಒಕೆ) ಭಾರತಕ್ಕೆ ಸೇರಿದ ಭೂಭಾಗ. ಭಾರತವು ಮುಂದೊಂದು ದಿನ ಈ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸುತ್ತದೆ ಎಂಬ ವಿಶ್ವಾಸವಿದೆ’ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್‌. ಜೈಶಂಕರ್‌ ಮಂಗಳವಾರ ಹೇಳಿದರು.

ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಇದೇ ಮೊದಲ ಬಾರಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಗ್ಗೆ ಭಾರತದ ನಿಲುವು ಹಿಂದಿನಿಂದಲೂ ಸ್ಪಷ್ಟವಾಗಿದೆ ಎಂದರು.

‘ಒಂದು ನೆರೆರಾಷ್ಟ್ರವು ಭಾರತಕ್ಕೆ ವಿಶೇಷವಾದ ಸವಾಲುಗಳನ್ನು ಒಡ್ಡುತ್ತಿದೆ. ಆ ರಾಷ್ಟ್ರವು ಗಡಿಯಾಚಿ ನಿಂದ ಭಯೋತ್ಪಾದನಾ ಕೃತ್ಯ ನಡೆಸುವು
ದನ್ನು ನಿಲ್ಲಿಸುವವರೆಗೂ ಆ ಸವಾಲು ಮುಂದುವರಿಯಲಿದೆ’ ಎಂದು ಪಾಕಿಸ್ತಾನವನ್ನು ಉಲ್ಲೇಖಿಸದೆ ಹೇಳಿದರು.

‘ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನದ ಜೊತೆಗೆ ಮಾತುಕತೆಯೇ ಇಲ್ಲ. ಬದಲಿಗೆ, ಭಯೋತ್ಪಾದನೆಯೇ ಮುಖ್ಯ ವಿಷಯವಾಗಬೇಕು. ನೆರೆರಾಷ್ಟ್ರವೊಂದು ನಮ್ಮ ದೇಶದೊಳಗೆ ಭಯೋತ್ಪಾಕ ಕೃತ್ಯಗಳನ್ನು ನಡೆಸುತ್ತಿದ್ದರೂ ಆ ರಾಷ್ಟ್ರದ ಜೊತೆ ಮಾತುಕತೆಗೆ ಮುಂದಾಗುವ ಯಾವುದಾದರೂ ರಾಷ್ಟ್ರ ವಿಶ್ವದಲ್ಲಿ ಇದೆಯೇ? ನಮ್ಮ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಅಸಹಜತೆ ಇರುವುದು ಅವರ ನಡತೆಯಲ್ಲಿ’ ಎಂದು ಜೈಶಂಕರ್‌ ಹೇಳಿದರು.

***

ಕಾಶ್ಮೀರ ವಿಚಾರವಾಗಿ ಜನರು ಏನು ಹೇಳುತ್ತಾರೆ ಎಂಬ ಬಗ್ಗೆ ಯೋಚನೆ ಮಾಡುವ ಅಗತ್ಯವಿಲ್ಲ. ಯಾಕೆಂದರೆ ಅದು ನಮ್ಮ ಆಂತರಿಕ ವಿಚಾರವಾಗಿತ್ತು ಮತ್ತು ಹಾಗೆಯೇ ಉಳಿಯಲಿದೆ
- ಎಸ್‌. ಜೈಶಂಕರ್‌ ವಿದೇಶಾಂಗ ವ್ಯವಹಾರಗಳ ಸಚಿವ

ಪ್ರತಿಕ್ರಿಯಿಸಿ (+)