ಗುರುವಾರ , ನವೆಂಬರ್ 14, 2019
19 °C
117 ರಾಷ್ಟ್ರಗಳ ಪಟ್ಟಿಯಲ್ಲಿ 102ನೇ ಸ್ಥಾನದಲ್ಲಿ ಭಾರತ

ವಿಶ್ವ ಹಸಿವು ಸೂಚ್ಯಂಕ: ಪಾಕ್, ಬಾಂಗ್ಲಾಕ್ಕಿಂತಲೂ ಕೆಳಗಿನ ಸ್ಥಾನಕ್ಕೆ ಕುಸಿದ ಭಾರತ

Published:
Updated:

ನವದೆಹಲಿ: ‘ಜಾಗತಿಕ ಹಸಿವು ಸೂಚ್ಯಂಕ’ದಲ್ಲಿ (ಹಸಿವಿನಿಂದ ಬಳಲುತ್ತಿರುವವರ ಪ್ರಮಾಣಕ್ಕೆ ಸಂಬಂಧಿಸಿದ್ದು) ಭಾರತ 102ನೇ ಸ್ಥಾನದಲ್ಲಿರುವುದಾಗಿ ವರದಿಯೊಂದು ತಿಳಿಸಿದೆ.

ಹಸಿವು ಸೂಚ್ಯಂಕಕ್ಕೆ ಸಂಬಂಧಿಸಿ ಜರ್ಮನಿಯ ಸ್ವಯಂಸೇವಾ ಸಂಸ್ಥೆ ‘ವೆಲ್‌ತ್ಹಂಗರ್‌ಲೈಫ್’ ಮತ್ತು ಐರ್ಲೆಂಡ್‌ನ ‘ಕನ್ಸರ್ನ್‌ ವಲ್ಡ್‌ವೈಡ್’ ಜಂಟಿಯಾಗಿ ವರದಿ ಸಿದ್ಧಪಡಿಸಿವೆ. ಒಟ್ಟು 117 ರಾಷ್ಟ್ರಗಳನ್ನೊಳಗೊಂಡ ಪಟ್ಟಿ ಇದಾಗಿದೆ.

ಇದನ್ನೂ ಓದಿ: ಹಸಿವು ನೀಗಿಸಲಿದೆ ‘ಸಮುದಾಯ ಫ್ರಿಜ್’

ಅತಿಹೆಚ್ಚು ಹಸಿವಿನಿಂದ ಬಳಲುತ್ತಿರುವವರಿರುವ 45 ದೇಶಗಳ ಪೈಕಿ ಭಾರತವೂ ಒಂದಾಗಿದೆ ಎಂದು ವರದಿ ತಿಳಿಸಿದೆ. 2014ರಲ್ಲಿ 77 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 55ನೇ ಸ್ಥಾನದಲ್ಲಿತ್ತು. ಪಾಕಿಸ್ತಾನ 94, ಬಾಂಗ್ಲಾದೇಶ 88 ಮತ್ತು ಶ್ರೀಲಂಕಾ 66ನೇ ಸ್ಥಾನದಲ್ಲಿವೆ.

ಜಾಗತಿಕ, ರಾಷ್ಟ್ರೀಯ ಮತ್ತು ಪ್ರಾದೇಶಕ ಮಟ್ಟದಲ್ಲಿ ಹಸಿವಿನಿಂದ ಬಳಲುತ್ತಿರುವವರ ಪ್ರಮಾಣವನ್ನು ಪತ್ತೆಹಚ್ಚಲು ಹಾಗೂ ಸಮಸ್ಯೆಯ ನಿವಾರಣೆ ನಿಟ್ಟಿನಲ್ಲಿ ಆಗುತ್ತಿರುವ ಪ್ರಗತಿ, ಹಿನ್ನಡೆಯ ಬಗ್ಗೆ ತಿಳಿದುಕೊಳ್ಳುವ ಸಲುವಾಗಿ ವಾರ್ಷಿಕ ಸೂಚ್ಯಂಕ ಸಿದ್ಧಪಡಿಸಲಾಗುತ್ತಿದೆ.

ಇದನ್ನೂ ಓದಿ: ಹಸಿವಿನಿಂದ ಬಳಲುತ್ತಿದ್ದಾರೆ ವಿಶ್ವದ 11.3 ಕೋಟಿ ಜನ!

‘ಭಾರತದಲ್ಲಿ 6ರಿಂದ 23 ತಿಂಗಳವರೆಗಿನ ವಯಸ್ಸಿನ ಶೇ 9.6ರಷ್ಟು ಶಿಶುಗಳಿಗೆ ಕನಿಷ್ಠ ಆಹಾರ ನೀಡಲಾಗುತ್ತಿದೆ. 2015–16ರ ಹೊತ್ತಿಗೆ, ಭಾರತದ ಶೇ 90ರಷ್ಟು ಮನೆಗಳು ಸುಧಾರಿತ ಕುಡಿಯುವ ನೀರಿನ ಲಭ್ಯತೆ ಹೊಂದಿವೆ. ಆದರೆ, ಶೇ 39ರಷ್ಟು ಮನೆಗಳಿಗೆ ಶೌಚಾಲಯ ಸೌಲಭ್ಯ ಹೊಂದಿರಲಿಲ್ಲ (ಐಐಪಿಎಸ್ ಮತ್ತು ಐಸಿಎಫ್ 2017)’ ಎಂದು ವರದಿ ಹೇಳಿದೆ.

ಇನ್ನಷ್ಟು...

ಪ್ರಧಾನಿ ಹೇಳಿದಂತೆ ಭಾರತ ನಿಜಯಕ್ಕೂ ಬಯಲು ಶೌಚ ಮುಕ್ತ ದೇಶವೇ?

ಆರೈಕೆ ಕೊರತೆಯಿಂದ ಮಕ್ಕಳಲ್ಲಿ ಅನಾರೋಗ್ಯ: ವಿಶ್ವ ಮಕ್ಕಳ ವರದಿ ಬಿಡುಗಡೆ

ಬಯಲುಶೌಚ: ಘೋಷಣೆಯೇನೋ ಆಕರ್ಷಕ, ವಸ್ತುಸ್ಥಿತಿ ಬೇರೆಯೇ ಇದೆ

ಬಯಲು ಶೌಚಮುಕ್ತ ಘೋಷಣೆ ನಂಬಲನರ್ಹ

ಪ್ರತಿಕ್ರಿಯಿಸಿ (+)