ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಪರೀಕ್ಷೆ ಮುಗಿಸಿದ ಅಗ್ನಿ–4

ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯುವ ಸಾಮರ್ಥ್ಯದ ಕ್ಷಿಪಣಿ
Last Updated 23 ಡಿಸೆಂಬರ್ 2018, 18:57 IST
ಅಕ್ಷರ ಗಾತ್ರ

ಬಾಲೇಶ್ವರ (ಒಡಿಶಾ):ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಅಗ್ನಿ–4 ಗುರುತ್ವಬಲ ಕ್ಷಿಪಣಿಯು 7ನೇ ಸುತ್ತಿನ ಪರೀಕ್ಷೆಯನ್ನು ಭಾನುವಾರ ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಭಾರತೀಯ ಸೇನೆಯು ಈ ಪರೀಕ್ಷೆಯನ್ನು ನಡೆಸಿತು. ಇಲ್ಲಿನ ಅಬ್ದುಲ್ ಕಲಾಂ ದ್ವೀಪದಲ್ಲಿನ ಕೇಂದ್ರೀಕೃತ ಪರೀಕ್ಷಾ ವಲಯದಿಂದ ಕ್ಷಿಪಣಿಯನ್ನು ಹಾರಿಸಲಾಯಿತು. ಪೂರ್ವನಿಗದಿಯಂತೆ ಕ್ಷಿಪಣಿಯ ಎಲ್ಲಾ ಉಪಕರಣಗಳೂ ಯಶಸ್ವಿಯಾಗಿ ಕಾರ್ಯನಿರ್ವಹಿಸಿದವು ಎಂದು ಸೇನಾ ಮೂಲಗಳು ಹೇಳಿವೆ.

ಗುರುತ್ವಬಲ ಕ್ಷಿಪಣಿಗಳು ಮೊದಲು ಬಾಹ್ಯಾಕಾಶಕ್ಕೆ ಹೋಗುತ್ತವೆ. ಅಲ್ಲಿಂದ ವಾತಾವರಣಕ್ಕೆ ಮರಳುತ್ತವೆ. ನಂತರ ಗುರಿಯತ್ತ ಮುನ್ನುಗ್ಗುತ್ತವೆ. ವಾತಾವರಣವನ್ನು ಮರುಪ್ರವೇಶಿಸುವಾಗ ಭಾರಿ ಪ್ರಮಾಣದಲ್ಲಿ ಘರ್ಷಣೆಯಾಗುತ್ತದೆ. ಆಗ ಕ್ಷಿಪಣಿಯ ಚಲನೆಯ ದಿಕ್ಕು ಬದಲಾಗುತ್ತದೆ. ಆಗ ದಿಕ್ಕನ್ನು ಸ್ವಯಂಚಾಲಿತವಾಗಿ ಸರಿಪಡಿಸಿಕೊಳ್ಳುವ ವ್ಯವಸ್ಥೆ ಈ ಕ್ಷಿಪಣಿಯಲ್ಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ವಾತಾವರಣವನ್ನು ಮರುಪ್ರವೇಶಿಸುವಾಗ ಕ್ಷಿಪಣಿಯ ಹೊರಭಾಗದಲ್ಲಿ ಭಾರಿ ಉಷ್ಣತೆ ಉಂಟಾಗುತ್ತದೆ. 4,000 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶವನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಕವಚವನ್ನು ಅಗ್ನಿ–4ಕ್ಕೆ ಅಳವಡಿಸಲಾಗಿದೆ. ಹೀಗಾಗಿ ಕ್ಷಿಪಣಿಯ ಒಳಗಿನ ಉಪಕರಣಗಳು ಅಂತಹ ಅತೀವ ಉಷ್ಣತೆಯಲ್ಲೂ ಕೆಲಸ ಮಾಡುತ್ತವೆ ಎಂದು ಮೂಲಗಳು ತಿಳಿಸಿವೆ.

* ಅಗ್ನಿ ಸರಣಿ ಮತ್ತು ಪೃಥ್ವಿ ಗುರುತ್ವಬಲ ಕ್ಷಿಪಣಿಗಳು ಭಾರತೀಯ ಸೇನಾಪಡೆಗಳ ಶಸ್ತ್ರಾಗಾರದಲ್ಲಿವೆ. ಅಗ್ನಿ–4 ಕ್ಷಿಪಣಿಯ ಸೇನಾಪಡೆಯ ದಾಳಿ ನಿರೋಧಕ ಸಾಮರ್ಥ್ಯ ಹೆಚ್ಚಿಸಲಿದೆ
-ಭಾರತೀಯ ಸೇನಾ ಮೂಲ

ಕ್ಷಿಪಣಿ ಹೇಗೆ ಕೆಲಸ ಮಾಡುತ್ತದೆ?

* ಗುರುತ್ವಬಲ ಕ್ಷಿಪಣಿಗಳು ಮೊದಲು ಬಾಹ್ಯಾಕಾಶಕ್ಕೆ ಹೋಗುತ್ತವೆ. ಅಲ್ಲಿಂದ ವಾತಾವರಣಕ್ಕೆ ಮರಳುತ್ತವೆ. ನಂತರ ಗುರಿಯತ್ತ ಮುನ್ನುಗ್ಗುತ್ತವೆ.

* ವಾತಾವರಣ ಮರುಪ್ರವೇಶಿಸುವಾಗ ಭಾರಿ ಪ್ರಮಾಣದಲ್ಲಿ ಘರ್ಷಣೆಯಾಗುತ್ತದೆ. ಆಗ ಕ್ಷಿಪಣಿಯ ಚಲನೆಯ ದಿಕ್ಕು ಬದಲಾಗುತ್ತದೆ. ದಿಕ್ಕನ್ನು ಸ್ವಯಂಚಾಲಿತವಾಗಿ ಸರಿಪಡಿಸಿಕೊಳ್ಳುವ ವ್ಯವಸ್ಥೆ ಈ ಕ್ಷಿಪಣಿಯಲ್ಲಿದೆ

* ವಾತಾವರಣ ಮರುಪ್ರವೇಶಿಸುವಾಗ ಕ್ಷಿಪಣಿಯ ಹೊರಭಾಗದಲ್ಲಿ ಭಾರಿ ಉಷ್ಣತೆ ಉಂಟಾಗುತ್ತದೆ.

* 4,000 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯವಿರುವ ಕವಚವನ್ನು ಅಗ್ನಿ–4ಕ್ಕೆ ಅಳವಡಿಸಲಾಗಿದೆ. ಹೀಗಾಗಿ ಕ್ಷಿಪಣಿಯ ಒಳಗಿನ ಉಪಕರಣ ಅಂತಹ ಅತೀವ ಉಷ್ಣತೆಯಲ್ಲೂ ಕೆಲಸ ಮಾಡುತ್ತವೆ

ಮುಖ್ಯಾಂಶಗಳು

*20 ಮೀಟರ್ ಕ್ಷಿಪಣಿಯ ಎತ್ತರ

* 17 ಟನ್ ಕ್ಷಿಪಣಿಯ ತೂಕ

* 4,000 ಕಿ.ಮೀ.ದಾಳಿ ವ್ಯಾಪ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT