₹ಬೆಲೆ ಕುಸಿತ: 70ವರ್ಷ ನಾವು ಮಾಡದ್ದನ್ನು ಮೋದಿ ಮಾಡಿದ್ದಾರೆ–ಕಾಂಗ್ರೆಸ್‌ ವ್ಯಂಗ್ಯ

7

₹ಬೆಲೆ ಕುಸಿತ: 70ವರ್ಷ ನಾವು ಮಾಡದ್ದನ್ನು ಮೋದಿ ಮಾಡಿದ್ದಾರೆ–ಕಾಂಗ್ರೆಸ್‌ ವ್ಯಂಗ್ಯ

Published:
Updated:

ನವದೆಹಲಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ, ಅಮೆರಿಕದ ಡಾಲರ್‌ ಎದುರು ರೂಪಾಯಿ ಬೆಲೆಯು ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಕುಸಿದಿದೆ. ಈ ಬಗ್ಗೆ ಕಾಂಗ್ರೆಸ್‌ ಟೀಕೆ ಮಾಡಿದ್ದು, 70 ವರ್ಷದಲ್ಲಿ ಕಾಂಗ್ರೆಸ್‌ ಮಾಡದ್ದನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದೆ. ಇತ್ತ ಎಎಪಿ, ಮೋದಿ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಲಿ ಎಂದು ಹೇಳಿದೆ.

’ಕಾಂಗ್ರೆಸ್ 70 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ ಒಂದು ಕೆಲಸವನ್ನು ಮೋದಿಜಿ ಕೊನೆಗೂ ಮಾಡಿಬಿಟ್ಟರು’ ಎಂದು ಕಾಂಗ್ರೆಸ್‌ ಟ್ವಿಟ್‌ ಮಾಡಿದೆ.

‘ಇತಿಹಾಸದಲ್ಲಿಯೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿಯುವ ಮೂಲಕ ರೂಪಾಯಿ ಮುಖಬೆಲೆಯು ಭಾರತದ ಸರ್ವೋಚ್ಚ ನಾಯಕನ ವಿರುದ್ಧ ಅವಿಶ್ವಾಸ ಮಂಡಿಸಿದೆ. ಹೌದು ರೂಪಾಯಿ ಏಕೆ ಕುಸಿಯುತ್ತಿದೆ. ಮಹಾನಾಯಕನ ಅರ್ಥಶಾಸ್ತ್ರ ಜ್ಞಾನ ತಿಳಿದುಕೊಳ್ಳಲು ಈ ವಿಡಿಯೊ ನೋಡಿ-ಕೇಳಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟ್ವಿಟ್‌ ಮಾಡಿದ್ದಾರೆ.

ಅನಧಿಕೃತ: ಸುಬ್ರಹ್ಮಣಿ ಸ್ವಾಮಿ ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ (Unofficial: Subramanian Swamy) ರೂಪಾಯಿ ಮೌಲ್ಯ ಕುಸಿತ ಸಂಬಂಧ ನರೇಂದ್ರ ಮೋದಿ ಅವರು ಈ ಹಿಂದೆ ಮಾತನಾಡಿರುವ ವಿಡಿಯೊವೊಂದನ್ನು ಟ್ವೀಟ್‌ ಮಾಡಲಾಗಿದೆ.

ವಿಡಿಯೊದಲ್ಲಿರುವ ಮೋದಿ ಮಾತೇನು?
ಈ ಹಿಂದೆ ಯುಪಿಎ ಸರ್ಕಾರದ ವಿರುದ್ಧ ಮಾತನಾಡಿದ್ದ ನರೇಂದ್ರ ಮೋದಿ ಅವರು, ‘ನಾನು ನಿಮಗೆ ಸವಾಲು ಹಾಕುತ್ತೇನೆ. ಅಟಲ್‌ ಬಿಹಾರಿ ವಾಜಪೇಯಿ ಅವರು ಇದ್ದಾಗಿಗಿಂತ ಈಗ ರೂಪಾಯಿ ಮೌಲ್ಯ ಕುಸಿದಿದೆಯೋ ಇಲ್ಲವೇ?’ ಎಂದು ಜನರನ್ನು ಪ್ರಶ್ನಿಸುತ್ತಾರೆ. ಅತ್ತ ಜನರಿಂದ ‘ಹೌದು’ ಎಂಬ ಪ್ರತಿಕ್ರಿಯೆ ಬರುತ್ತದೆ.

‘ರೂಪಾಯಿ ಉರುಳಿ ಬಿದ್ದಿದೆಯೋ? ಇಲ್ಲವೋ? ರೂಪಾಯಿ ಮೌಲ್ಯ ಆಸ್ಪತ್ರೆಗೆ ಅಲೆಯುತ್ತಿದೆಯೋ? ಇಲ್ಲವೋ?’ ಎಂದು ಪ್ರಶ್ನಿಸುವ ಮೋದಿ ಅವರು ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರಿಸಿ, ‘ನೀವು ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತ ಎಷ್ಟು ದಿನಗಳವರೆಗೂ ಸತ್ಯವನ್ನು ಮುಚ್ಚಿಡಬಲ್ಲಿರಿ?’ ಎಂದು ಕೇಳಿರುವುದು ವಿಡಿಯೊದಲ್ಲಿದೆ.

ಮೋದಿ ಸರ್ಕಾರ ಎಚ್ಚೆತ್ತುಕೊಳ್ಳಲಿ: ಎಎಪಿ
ಜನರು ಪೆಟ್ಟುಗಳ ಮೇಲೆ ಪೆಟ್ಟು ತಿನ್ನುತ್ತಿದ್ದಾರೆ,
ರೂಪಾಯಿ ಮೌಲ್ಯ ಮತ್ತಷ್ಟು ಕುಸಿದಿದೆ,
ಈಗಲಾದರೂ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳಲಿ 
ಎಂದಿರುವ ಎಎಪಿ #IndianEcononomyIsDying ಎಂಬ ಹ್ಯಾಷ್‌ ಟ್ಯಾಗ್‌ನೊಂದಿಗೆ ಟ್ವೀಟ್‌ ಮಾಡಿದೆ
 

* ಇದನ್ನು ಓದಿ...

* ₹ ಬೆಲೆ ಸಾರ್ವಕಾಲಿಕ ಕುಸಿತ 

ರೂಪಾಯಿ ಕುಸಿತಕ್ಕೆ ಬಾಹ್ಯ ವಿದ್ಯಮಾನ ಕಾರಣ

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !