ಆಂಧ್ರದ ಶಾಲೆಗಳಿಗೆ ₹2.5 ಕೋಟಿ ಮೌಲ್ಯದ ಪುಸ್ತಕ

7
ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಕೊಡುಗೆ

ಆಂಧ್ರದ ಶಾಲೆಗಳಿಗೆ ₹2.5 ಕೋಟಿ ಮೌಲ್ಯದ ಪುಸ್ತಕ

Published:
Updated:

ಹೈದರಾಬಾದ್‌: ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಮತ್ತು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್‌ ಮಂಡಳಿ ಸದಸ್ಯೆ ಸುಧಾ ಮೂರ್ತಿ ಅವರು ಕೃಷ್ಣ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಶಾಲೆಗಳಿಗೆ ಸುಮಾರು ₹2.5 ಕೋಟಿ ಮೌಲ್ಯದ ಪುಸ್ತಕಗಳನ್ನು ದಾನ ನೀಡಲಿದ್ದಾರೆ.

ನೈತಿಕ ಶಿಕ್ಷಣ ಮೌಲ್ಯಗಳನ್ನು ಮಕ್ಕಳಲ್ಲಿ ಬೆಳೆಸುವಂತಹ ‍ಪುಸ್ತಕಗಳನ್ನು ಅವರು ಶಾಲೆಗಳಿಗೆ ದಾನ ನೀಡುತ್ತಿದ್ದಾರೆ. ಪ್ರಾಥಮಿಕ ಶಾಲೆಗಳಿಗೆ 250 ಶೀರ್ಷಿಕೆಗಳ ಮತ್ತು ಪ್ರೌಢಶಾಲೆಗಳಿಗೆ 300 ಶೀರ್ಷಿಕೆಗಳ ಪುಸ್ತಕಗಳನ್ನು ಅವರು ಕೊಡುತ್ತಿದ್ದಾರೆ.

ಕಳೆದ ವರ್ಷ ಸುಧಾ ಮೂರ್ತಿ ಅವರು ವಿಜಯವಾಡದ ಪುರಸಭೆಯ 54 ಶಾಲೆಗಳಿಗೆ ಮತ್ತು ಜಿಲ್ಲಾ ಪರಿಷತ್‌ ಅಧೀನದ 45 ಸರ್ಕಾರಿ ಶಾಲೆಗಳಿಗೆ ಸುಮಾರು ₹3 ಕೋಟಿ ಮೌಲ್ಯದ ಪುಸ್ತಕಗಳನ್ನು ಕೊಡುಗೆ ನೀಡಿದ್ದರು. ಅಲ್ಲದೆ ಅವರು, ಕರ್ನಾಟಕದಲ್ಲಿ 60,000 ಗ್ರಂಥಾಲಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಸುಧಾ ಮೂರ್ತಿಯವರು ತಮ್ಮ ಸಮಾಜ ಸೇವಾ ಕಾರ್ಯಗಳಿಗೆ ಆಂಧ್ರಪ್ರದೇಶ ಆಯ್ಕೆ ಮಾಡಿಕೊಂಡಿದ್ದು, ರಾಜ್ಯವನ್ನು ಜ್ಞಾನದ ತಾಣವಾಗಿ ಬೆಳೆಸಲು ಕೈಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !